HomeKarnatakaಬೊಮ್ಮಾಯಿ, ಕಟೀಲ್ ಅವರೇ ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ: ಬಿಜೆಪಿ ನಾಯಕರ ಕಾಲೆಳೆದ...

ಬೊಮ್ಮಾಯಿ, ಕಟೀಲ್ ಅವರೇ ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ: ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್

ಬೆಂಗಳೂರು : ಬೊಮ್ಮಾಯಿ ಅವರೇ, ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ( BJP) ನಾಯಕರ ಕಾಲೆಳೆದಿದೆ.

ಬೊಮ್ಮಾಯಿ ಅವರೇ, ನಿಮ್ಮ ಮನೆಗೂ ಫ್ರೀ ಶೋಭಾ ಕರಂದ್ಲಾಜೆ ಅವರೇ, ಸಿಟಿ ರವಿ ಅವರೇ ನಿಮ್ಮ ಮನೆಯವರಿಗೂ ಪ್ರಯಾಣ ಫ್ರೀ! ಎಂದು ಕಾಂಗ್ರೆಸ್ (Congress) ಟ್ವೀಟ್ ಮೂಲಕ ಬಿಜೆಪಿ ನಾಯಕರ ಕಾಲೆಳೆದಿದೆ. ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ)! ಇದು ನಮ್ಮ ಗ್ಯಾರಂಟಿ ಎಂದು ಕಾಂಗ್ರೆಸ್ ಬಿಜೆಪಿ ನಾಯಕರ ಕಾಲೆಳೆದಿದೆ.

ನಾವು ನುಡಿದಂತೆ ನಡೆಯುವವರು, ನಾವು ಮಾತು ಉಳಿಸಿಕೊಳ್ಳುವವರು. ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ ಇತಿಹಾಸ ಸೃಷ್ಟಿಸಿದ್ದೇವೆ. ಇದು ನಮ್ಮ ಬದ್ಧತೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಜೆಪಿಗೆ ಸಂವಿಧಾನ ಎಂದರೆ ಅಲರ್ಜಿ, ಪ್ರಜಾಪ್ರಭುತ್ವ ಎಂದರೆ ಅಲರ್ಜಿ, ಪ್ರಶ್ನೆಗಳು ಅಂದರೆ ಅಲರ್ಜಿ, ಸಮಾನತೆ ಎಂದರೆ ಅಲರ್ಜಿ. 10ನೇ ತರಗತಿಯ ಪಠ್ಯದಿಂದ NCERT ಪ್ರಜಾಪ್ರಭುತ್ವ ವಿಷಯದ ಪಾಠವನ್ನು ಕೈಬಿಟ್ಟಿದೆ. ಪ್ರಜಾಪ್ರಭುತ್ವದ ಅರಿವನ್ನು ದೇಶದ ಪ್ರಜೆಗಳಿಂದ ಮರೆಮಾಚುವ ಹುನ್ನಾರದಲ್ಲಿದೆ ಸರ್ವಾಧಿಕಾರ ಧೋರಣೆಯ ಬಿಜೆಪಿ ಎಂದು ಕಾಂಗ್ರೆಸ್ ಟೀಕಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular