ಬೇಸಿಗೆ ಪ್ರವಾಸಕ್ಕೆ ಈ ಜಾಗ ಬೆಸ್ಟ್

ಬೇಸಿಗೆ ಉರಿ ಬಿಸಿಲು ತಡೆಯೋದು ತುಂಬಾ ಕಷ್ಟ. ಬೇಸಿಗೆಯಲ್ಲಿ ಮನೆಯಿಂದ ಹೊರ ಬೀಳೋದು ಕಷ್ಟ. ಹಾಗಂತ ಮನೆಯಲ್ಲಿರಲೂ ಆಗೋದಿಲ್ಲ. ಮಕ್ಕಳಿಗೆ ರಜೆ ಇರುವ ಕಾರಣ ಊರಿನ ಬಿಸಿಲಿಗೆ ಬೇಸತ್ತು  ಬೇರೆ ಸ್ಥಳಕ್ಕೆ ಹೋಗಲು ಬಯಸಿದ್ರೆ ಈ  ನಗರಗಳು ನಿಮಗೆ ಅತ್ಯುತ್ತಮ ಆಯ್ಕೆ.

ಹಾರ್ಸ್ಲೆ ಹಿಲ್ಸ್, ಆಂಧ್ರ ಪ್ರದೇಶ:  ಇದು ಸ್ವರ್ಗಕ್ಕೆ ಸಮ. ಗುಡ್ಡಗಳ ಸೌಂದರ್ಯ ಆನಂದಿಸಬೇಕೆಂದಿದ್ದರೆ  ಖಂಡಿತವಾಗಿಯೂ ಇಲ್ಲಿಗೆ ಒಮ್ಮೆ ಭೇಟಿ  ನೀಡಿ. ನೀವು ಇಲ್ಲಿ  ಗುಲ್ಮೊಹರ್, ನೀಲಿ ಗುಲ್ಮೊಹರ್ ಮತ್ತು ಯೂಕಲಿಪ್ಟಸ್ ಮರಗಳನ್ನು ಕಾಣಬಹುದು.

ಶಿಲ್ಲಾಂಗ್ : ಸುಂದರವಾದ ಪರ್ವತವನ್ನು ನೋಡುವ ಮಜಾವೇ ಬೇರೆ. ಶಿಲ್ಲಾಂಗ್ ಒಂದು ಅತ್ಯಂತ ಸುಂದರ ಸ್ಥಳವಾಗಿದ್ದು ಇಲ್ಲಿನ ವಿವಿಧ ಉತ್ಸವಗಳು ಮತ್ತು ಸಂಪ್ರದಾಯಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಚಿರಾಪುಂಜಿ: ಶಿಲ್ಲಾಂಗ್ನಿಂದ ಚಿರಾಪುಂಜಿಗೆ ಹೋಗುವ ದಾರಿಯಲ್ಲಿ ನಿಮಗೆ ಅನೇಕ ಗುಹೆಗಳು ಕಾಣಸಿಗುತ್ತವೆ. ಚಿರಾಪುಂಜಿಯು ಏಷ್ಯಾದ ಅತ್ಯಂತ ಸ್ವಚ್ಛ ಸ್ಥಳಗಳಲ್ಲಿ ಒಂದಾಗಿದೆ. ಅದಕ್ಕಾಗಿಯೇ ಇದರ ಸೌಂದರ್ಯ ಮತ್ತಷ್ಟು ಹೆಚ್ಚು.

ಮನಾಲಿ: ಮನಾಲಿ ಯನ್ನು ಒಮ್ಮೆಯಾದ್ರೂ ನೋಡಲೇಬೇಕು. ಈ ಸ್ಥಳ ಯಾವಾಗಲೂ ಶಾಂತ, ತಂಪಾಗಿ ಮತ್ತು ಸುಂದರವಾಗಿರುತ್ತದೆ. ಕಾಡಿನ ಮತ್ತು ಶೀತ ವಾತಾವರಣವು ಮನಾಲಿಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.

ತವಾಂಗ್: ಅರುಣಾಚಲ ಪ್ರದೇಶದ ಈ ನಗರ ಸಮುದ್ರ ಮಟ್ಟಕ್ಕಿಂತ 10,000 ಅಡಿ ಎತ್ತರದಲ್ಲಿದೆ. ಹಲವಾರು ಕಂದಕ, ಜಲಪಾತಗಳು ಮತ್ತು ನದಿಗಳಿಗೆ ಹೆಸರಾಗಿದೆ ತವಾಂಗ್. ತವಾಂಗ್ ನ ಸರೋವರಗಳು ಮತ್ತು ಜಲಪಾತಗಳು ಸುಡು ಬಿಸಿಲಿನಿಂದ ಬಳಲಿದ ಮನಸಿಗೆ ಮುದ ನೀಡುತ್ತದೆ.

ದ್ರಾಸ್:  ವಿಶ್ವದ ಎರಡನೇ ಅತಿ ಶೀತ ಪ್ರದೇಶವಾದ ಈ ಕಣಿವೆ, ಎತ್ತರದ ಬೆಟ್ಟ ಗುಡ್ಡಗಳಿಂದ ಕೂಡಿದ್ದು ಸಮುದ್ರ ಮಟ್ಟದಿಂದ 10,000 ಅಡಿ ಎತ್ತರದಲ್ಲಿದೆ.

ತೀರ್ಥನ್ ಕಣಿವೆ:  ಪ್ರಕೃತಿಪ್ರಿಯರಿಗೆ ಈ ಸ್ಥಳವು ಸ್ವರ್ಗ. ತೀರ್ಥನ್ ಕಣಿವೆ ಹಿಮಾಲಯನ್ ರಾಷ್ಟ್ರೀಯ ಉದ್ಯಾನದಿಂದ 3 ಕಿ.ಮೀ ದೂರದಲ್ಲಿದೆ. ಇಲ್ಲಿನ ಟ್ರೌಟ್ ಮೀನುಗಳು ಬಹಳ ಜನಪ್ರಿಯವಾಗಿದೆ.

ಊಟಿ : ಊಟಿಯು ಭಾರತದ ಅತ್ಯಂತ ಪ್ರಸಿದ್ಧ ಗಿರಿಧಾಮಗಳಲ್ಲಿ ಒಂದಾಗಿದೆ. ಕಾಫಿ ಮತ್ತು ಚಹಾ ತೋಟಗಳಿಗೆ ಹೆಸರುವಾಸಿಯಾದ ಊಟಿಯ ಪರ್ವತಗಳು ಮತ್ತು ತಂಪು ಗಾಳಿ ಪ್ರವಾಸಿಗರನ್ನು ತಮ್ಮತ್ತ  ಕೈಬೀಸಿ ಕರೆಯುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read