HomeLatest Newsಬೇಸಿಗೆಯಲ್ಲಿ ಬಾಯಾರಿಕೆ ತಣಿಸಲು ಕುಡಿಯಿರಿ ತಂಪು ತಂಪು ‘ಮಾವಿನ ಕಾಯಿ’ ಜ್ಯೂಸ್

ಬೇಸಿಗೆಯಲ್ಲಿ ಬಾಯಾರಿಕೆ ತಣಿಸಲು ಕುಡಿಯಿರಿ ತಂಪು ತಂಪು ‘ಮಾವಿನ ಕಾಯಿ’ ಜ್ಯೂಸ್

ಬೇಸಿಗೆಯಲ್ಲಿ ಎಷ್ಟು ನೀರು ಕುಡಿದ್ರೂ ಸಾಕಾಗೋದಿಲ್ಲ. ಲಿಂಬು ಜ್ಯೂಸ್, ಕೋಕಂ ಜ್ಯೂಸ್, ಮಜ್ಜಿಗೆ ಹೀಗೆ ಆರೋಗ್ಯಕ್ಕೆ ಒಳ್ಳೆಯದಾದ ಹಾಗೂ ದೇಹಕ್ಕೆ ತಂಪೆನಿಸುವ ಜ್ಯೂಸ್ ಕುಡಿಯಲು ಎಲ್ಲರೂ ಬಯಸ್ತಾರೆ. ಮಾವಿನ ಕಾಯಿಯಿಂದ ಕೂಡ ಜ್ಯೂಸ್ ಮಾಡಬಹುದು.ಮಾವಿನ ಕಾಯಿ ಜ್ಯೂಸ್ ಗೆ ಬೇಕಾಗುವ ಪದಾರ್ಥ:

ಮಾವಿನ ಕಾಯಿ – 1

ಜೀರಿಗೆ ಪುಡಿ – 2 ಚಮಚ

ಕಾಳು ಮೆಣಸು – 2

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಪ್ಪು ಉಪ್ಪು – 2 ಚಮಚ

ಸಕ್ಕರೆ – 100-150 ಗ್ರಾಂ

ಪುದೀನಾ ಎಲೆ- 20-30

ಮಾವಿನ ಕಾಯಿ ಜ್ಯೂಸ್ ಮಾಡುವ ವಿಧಾನ:

ಮೊದಲು ಮಾವಿನ ಕಾಯಿಯ ಸಿಪ್ಪೆ ತೆಗೆದು ಅದನ್ನು ಸಣ್ಣದಾಗಿ ಕಟ್ ಮಾಡಿ. ಸಣ್ಣದಾಗಿ ಹೆಚ್ಚಿಕೊಂಡ ಮಾವಿನ ಕಾಯಿಯನ್ನು ಒಂದು ಕಪ್ ನೀರಿನಲ್ಲಿ ಹಾಕಿ ಬೇಯಿಸಿಕೊಳ್ಳಿ.

ನಂತ್ರ ಮಿಕ್ಸಿ ಜಾರ್ ಗೆ ಬೇಯಿಸಿದ ಮಾವಿನಕಾಯಿ ಹೋಳು, ಪುದೀನಾ ಎಲೆ, ಸಕ್ಕರೆ, ಉಪ್ಪು ಹಾಗೂ ಕಾಳು ಮೆಣಸನ್ನು ಹಾಕಿ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ಎರಡು ಲೋಟ ನೀರು ಹಾಕಿ ಜ್ಯೂಸ್ ಸಿದ್ದಮಾಡಿ. ತಣ್ಣನೆಯ ಜ್ಯೂಸ್ ಕುಡಿಯಬಯಸುವವರು ಇದಕ್ಕೆ ಐಸ್ ಹಾಕಿಕೊಳ್ಳಬಹುದು.

For Latest News Updates, Join Our Whatsapp Community🚩
RELATED ARTICLES

Most Popular