HomeHealthಬೇಸಿಗೆಯಲ್ಲಿ ತಿನ್ನಲೇಬೇಕು ಈ ತರಕಾರಿ, ಇದರಿಂದಾಗುವ ಪ್ರಯೋಜನ ತಿಳಿದರೆ ಬೆರಗಾಗ್ತೀರಾ..!

ಬೇಸಿಗೆಯಲ್ಲಿ ತಿನ್ನಲೇಬೇಕು ಈ ತರಕಾರಿ, ಇದರಿಂದಾಗುವ ಪ್ರಯೋಜನ ತಿಳಿದರೆ ಬೆರಗಾಗ್ತೀರಾ..!

ಕುಂಬಳಕಾಯಿ ಅತ್ಯಂತ ಆರೋಗ್ಯಕರ ತರಕಾರಿಗಳಲ್ಲೊಂದು. ಕುಂಬಳಕಾಯಿಯಿಂದ ಕಡುಬು, ಖೀರು, ರಾಯತ, ಪಲ್ಯ ಹೀಗೆ ಅನೇಕ ರುಚಿಕರ ತಿನಿಸುಗಳನ್ನು ತಯಾರಿಸುತ್ತಾರೆ. ಕುಂಬಳಕಾಯಿ ರುಚಿಯ ಜೊತೆಗೆ ಬಹಳಷ್ಟು ಪೋಷಕಾಂಶಗಳಿಂದ ಕೂಡಿದೆ.

ಇದರಲ್ಲಿ ವಿಟಮಿನ್ ಬಿ, ವಿಟಮಿನ್ ಎ ಸೇರಿದಂತೆ ಅನೇಕ ಆರೋಗ್ಯಕರ ಅಂಶಗಳಿವೆ.  ಅದರ ಪರಿಣಾಮವು ಸಹ ತಂಪಾಗಿರುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಕುಂಬಳಕಾಯಿ ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಕುಂಬಳಕಾಯಿಯನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ

ಕುಂಬಳಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ದುರ್ಬಲವಾಗಿದ್ದರೆ ಕುಂಬಳಕಾಯಿಯನ್ನು ಸೇವಿಸಬೇಕು.  ಇದರಲ್ಲಿ ಬೀಟಾ ಕ್ಯಾರೋಟಿನ್ ಅಂಶವಿದ್ದು, ಇದು ಅನೇಕ ರೋಗಗಳಿಂದ ಮುಕ್ತಿ ಪಡೆಯಲು ಸಹ ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಕುಂಬಳಕಾಯಿಯನ್ನು ಪ್ರತಿದಿನ ಸೇವಿಸಬೇಕು.

ತೂಕ ಕಡಿಮೆ ಮಾಡುತ್ತದೆ

ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರು ಆಹಾರದಲ್ಲಿ ಕುಂಬಳಕಾಯಿಯನ್ನು ಸೇರಿಸಿ. ಏಕೆಂದರೆ ಇದರಲ್ಲಿ ಸಾಕಷ್ಟು ನಾರಿನಂಶವಿದ್ದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುತ್ತದೆ. ಕ್ಯಾಲೊರಿಗಳು ಸಹ ಕಡಿಮೆ ಪ್ರಮಾಣದಲ್ಲಿರುತ್ತವೆ. ಹಾಗಾಗಿ ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೃದಯ ರೋಗಗಳಿಗೆ ಮದ್ದು

ಕುಂಬಳಕಾಯಿಯ ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಉತ್ತಮ ಪ್ರಮಾಣದ ಫೈಬರ್ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಎಂಟಿಒಕ್ಸಿಡೆಂಟ್‌ಗಳು ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಡುತ್ತವೆ. ಪ್ರತಿದಿನ ಕುಂಬಳಕಾಯಿಯನ್ನು ಸೇವಿಸಿದರೆ, ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು.

ದೇಹವು ತೇವಾಂಶದಿಂದ ಕೂಡಿರುತ್ತದೆ

ಬೇಸಿಗೆಯಲ್ಲಿ ಹೆಚ್ಚಿನವರ ದೇಹದಲ್ಲಿ ನೀರಿನ ಕೊರತೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿರ್ಜಲೀಕರಣದ ಸಮಸ್ಯೆಯನ್ನು ತಪ್ಪಿಸಲು ಕುಂಬಳಕಾಯಿಯನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ಶೇ.90 ರಷ್ಟು ನೀರು ಇರುವುದರಿಂದ ಡಿಹೈಡ್ರೇಟ್‌ ಆಗದಂತೆ ಇದು ತಡೆಯುತ್ತದೆ.

 

For Latest News Updates, Join Our Whatsapp Community🚩
RELATED ARTICLES

Most Popular