‘ಬೇರ’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

ವಿನು ಬಳಂಜ ನಿರ್ದೇಶನದ ‘ಬೇರ’  ಚಿತ್ರದ ‘ನೆಮ್ಮದಿ ಹುಡುಕಲು’ ಎಂಬ ಲಿರಿಕಲ್ ವಿಡಿಯೋವೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ. ಹಂಸಿಕಾ ಅಯ್ಯರ್ ಧ್ವನಿಯಾಗಿರುವ ಈ ಹಾಡಿಗೆ ಮಣಿಕಂಠ ಕದ್ರಿ ಸಂಗೀತ ಹಾಗೂ ವಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ. ಈ ಹಾಡು ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದಿದೆ.

ದಿವಾಕರ ದಾಸ್ ನೆರ್ಲಜೆ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ರಾಮದಾಸ್ ಶೆಟ್ಟಿ, ಹರ್ಷಿಕಾ ಪೂಣಚ್ಚ, ದತ್ತಣ್ಣ, ಹರ್ಷವರ್ಧನ್, ಶೈನ್ ಶೆಟ್ಟಿ, ಸುಮನ್ ತಳ್ವಾರ್‌ ಹಾಗೂ ಯಶ್ ಶೆಟ್ಟಿ ಸೇರಿದಂತೆ ಮೊದಲಾದ ತಾರಾ ಬಳಗವಿದೆ. ಜೂನ್ 16ಕ್ಕೆ ಈ ಸಿನಿಮಾ ರಾಜ್ಯಾದ್ಯಂತ ತೆರೆ ಕಾಣಲಿದೆ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read