
ಗಂಗಾ ನಗರದಲ್ಲಿ ಈ ಘಟನೆ ನಡೆದಿದ್ದು, ಸರ್ಕಾರಿ ಶಾಲೆ ಬಳಿ ಅಣ್ಣಮ್ಮ ಎಂಬವರು ವಾಸವಾಗಿದ್ದರು. ಈಕೆಯ ಪತಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದು, ಮಾತು ಬಾರದ ಅಣ್ಣಮ್ಮ ಕೂಲಿ ಕೆಲಸ ಮಾಡಿ ಮಗನನ್ನು ಸಾಕುತ್ತಿದ್ದರು.
ಎರಡು ದಿನಗಳ ಹಿಂದೆ 40 ವರ್ಷದ ಅಣ್ಣಮ್ಮ ಮಲಗಿದ್ದ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದು, ಇದು ಆಕೆಯ 11 ವರ್ಷದ ಮಗನ ಅರಿವಿಗೆ ಬಂದಿಲ್ಲ. ಬೆಳಗ್ಗೆ ಎದ್ದು ಆಟವಾಡಲು ಹೋಗುತ್ತಿದ್ದ ಮಗ, ತಾಯಿ ಮಲಗಿದ್ದಾಳೆ ಎಂದು ಸಂಬಂಧಿಕರ ಮನೆಯಲ್ಲಿ ಊಟ ಮಾಡುತ್ತಿದ್ದ ಎನ್ನಲಾಗಿದೆ.
ಆದರೆ ಎರಡು ದಿನಗಳ ಬಳಿಕ ಅವರ ಮನೆಯಿಂದ ದುರ್ವಾಸನೆ ಬರಲು ಆರಂಭಿಸಿದ್ದು, ಹೋಗಿ ನೋಡಿದ ವೇಳೆ ಅಣ್ಣಮ್ಮ ಮೃತಪಟ್ಟಿರುವುದು ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳ ಪರಿಶೀಲಿಸಿದ ಪೊಲೀಸರು ಮೇಲ್ನೋಟಕ್ಕೆ ಇದು ಸಹಜ ಸಾವು ಎಂದು ಹೇಳಿದ್ದಾರೆ.

