HomeKarnatakaಬಿಜೆಪಿ ಯಾರ ಕಪಿಮುಷ್ಠಿಯಲ್ಲೂ ಇಲ್ಲ; ಶೆಟ್ಟರ್ ಹೇಳಿಕೆಗೆ ಸಿಎಂ ತಿರುಗೇಟು

ಬಿಜೆಪಿ ಯಾರ ಕಪಿಮುಷ್ಠಿಯಲ್ಲೂ ಇಲ್ಲ; ಶೆಟ್ಟರ್ ಹೇಳಿಕೆಗೆ ಸಿಎಂ ತಿರುಗೇಟು

ಬಾಗಲಕೋಟೆ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ಯಾವುದೇ ತೊಂದರೆಯಾಗಲ್ಲ. ಲಿಂಗಾಯಿತರಿಗೆ ಸಮರ್ಪಕ ಮನ್ನಣೆ ನೀಡಿದ್ದೇ ಬಿಜೆಪಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ಕೆಲವು ನಾಯಕರ ಕಪಿಮುಷ್ಹಿಯಲ್ಲಿದೆ ಎಂಬ ಜಗದೀಶ್ ಶೆಟ್ಟರ್ ಆರೋಪಕ್ಕೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಬಿಜೆಪಿ ಯಾರ ಕಪಿಮುಷ್ಠಿಯಲ್ಲಿಯೂ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ವ್ಯವಸ್ಥೆ ಬದ್ಧ ಪಕ್ಷ. ಎಲ್ಲವನ್ನೂ ಪರಿಶೀಲಿಸಿ ಹೈಕಮಾಂಡ್ ನಾಯಕರು ಟಿಕೆಟ್ ನೀಡಿದ್ದಾರೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಈ ಬಾರಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದರು.

For Latest News Updates, Join Our Whatsapp Community🚩
RELATED ARTICLES

Most Popular