HomeKarnatakaಬಿಜೆಪಿ ಅಭ್ಯರ್ಥಿ ಸೋಲಿಸಲು ಈಶ್ವರಪ್ಪ ಪ್ಲಾನ್; ಆಯನೂರು ಮಂಜುನಾಥ್ ಹೊಸ ಬಾಂಬ್

ಬಿಜೆಪಿ ಅಭ್ಯರ್ಥಿ ಸೋಲಿಸಲು ಈಶ್ವರಪ್ಪ ಪ್ಲಾನ್; ಆಯನೂರು ಮಂಜುನಾಥ್ ಹೊಸ ಬಾಂಬ್

ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ ಅವರನ್ನು ಸೋಲಿಸುವುದೇ ಕೆ.ಎಸ್. ಈಶ್ವರಪ್ಪನವರ ಮೊದಲ ಆದ್ಯತೆಯಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೊಸ ಬಾಂಬ್ ಸಿಡಿಸಿದ್ದಾರೆ.

ಅವರು ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಶ್ವರಪ್ಪನವರು ತಮಗೆ ಸೀಟು ಸಿಗಬೇಕೆಂದು ಪ್ರಯತ್ನಿಸಿದರು. ಅದು ಆಗದಿದ್ದ ಕಾಲಕ್ಕೆ ತಮ್ಮ ಮಗನಿಗಾದರೂ ಸಿಗಲಿ ಎಂದು ಹಂಬಲಿಸಿದರು. ಆದರೆ ಅದೂ ಸಾಧ್ಯವಾಗದಿದ್ದಾಗ ತಮ್ಮ ಮಾನಸಪುತ್ರನಂತಿರುವ ಚನ್ನಬಸಪ್ಪನವರಿಗೆ ಟಿಕೆಟ್ ಕೊಡಿಸಿದ್ದಾರೆ. ಹಾಗೆ ಕೊಡಿಸಿದ ಮೇಲೂ ಅವರನ್ನು ಗೆಲ್ಲಿಸಬೇಕೆಂಬ ಮನಸ್ಸು ಅವರಿಗಿಲ್ಲ. ಏಕೆಂದರೆ ಅಕಸ್ಮಾತ್ ಚನ್ನಬಸಪ್ಪ ಗೆದ್ದರೆ ತಮ್ಮ ಮಗನ ರಾಜಕೀಯ ಜೀವನವೇ ಮುಗಿದುಹೋಗುತ್ತದೆ ಎನ್ನುವ ಆತಂಕ ಅವರನ್ನು ಕಾಡುತ್ತಿದೆ. ಹಾಗಾಗಿ ಅವರು ಮೇಲುನೋಟಕ್ಕೆ ಬಿಜೆಪಿಯಲ್ಲಿದ್ದರೂ ಕೂಡ ಶಿವಮೊಗ್ಗ ಕ್ಷೇತ್ರದ ಮಟ್ಟಿಗೆ ಚನ್ನಬಸಪ್ಪ ಅವರನ್ನು ಸೋಲಿಸಲು ಪ್ರಯತ್ನ ಪಡುತ್ತಾರೆ. ಇದು ನನ್ನ ಮಾತಲ್ಲ. ಸಾರ್ವಜನಿಕರ ಮಾತನ್ನೇ ನಾನು ಹೇಳಿದ್ದೇನೆ ಎಂದು ಆಯನೂರು ತಿಳಿಸಿದರು.

ಹಾಗೆಯೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹೆಚ್.ಸಿ. ಯೋಗೇಶ್ ಕೂಡ ಈಶ್ವರಪ್ಪನವರ ನೆರಳೇ ಆಗಿದ್ದಾರೆ. ಅವರದೇ ವಾರ್ಡಿನಲ್ಲಿ ಹೆಚ್.ಸಿ. ಯೋಗೇಶ್ ಅವರನ್ನು ಮೂರು ಬಾರಿ ಗೆಲ್ಲಿಸಿದ್ದಾರೆ. ಮತ್ತು ದೆಹಲಿ ಮಟ್ಟದಲ್ಲಿ ಪ್ರಯತ್ನಿಸಿ ಯೋಗೇಶ್ ಅವರಿಗೆ ಟಿಕೆಟ್ ಸಿಗುವಂತೆ ಮಾಡಿದ್ದಾರೆ. ಇದೊಂದು ರಾಜಕೀಯ ತಂತ್ರವೂ ಆಗಿದೆ. ಕುತಂತ್ರವೂ ಆಗಿದೆ ಎಂದು ನೇರ ಆರೋಪ ಮಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್‌ನವರು ಲಿಂಗಾಯತ ಮತಗಳು ಕ್ರೋಡೀಕರಣವಾಗಬೇಕೆಂದುಕೊಂಡಿದ್ದಾರೆ. ಆದರೆ ಅದು ಸಾಧ್ಯವಿಲ್ಲ ನಮ್ಮದು ಜಾತ್ಯತೀತ ಪಕ್ಷ. ಶಾಂತಿಯನ್ನು ಬಯಸುವುದೇ ನಮ್ಮ ಗುರಿ. ಶಾತಿ ನೆಮ್ಮದಿಯನ್ನು ಬಯಸುವ ಎಲ್ಲರೂ ನಮ್ಮನ್ನು ಬೆಂಬಲಿಸುತ್ತಾರೆ. ಒಂದು ರೀತಿಯಲ್ಲಿ ಈಶ್ವರಪ್ಪನವರು ನಮ್ಮ ಪರವಾಗಿ ಇರುವುದರಿಂದ ಗೆಲುವು ನಮಗೆ ಖಚಿತ ಎಂದರು.

 

For Latest News Updates, Join Our Whatsapp Community🚩
RELATED ARTICLES

Most Popular