ಬಾಲಕಿಯ ಸೊಂಟವನ್ನೇ ಕತ್ತರಿಸಿದ್ದ ಜಾದೂಗಾರ; ಆದರೂ ಚಲಿಸುತ್ತಿದ್ದವು ಕಾಲುಗಳು; ಈ ವಿಡಿಯೋದ ಅಸಲಿಯತ್ತು ಇಲ್ಲಿದೆ ನೋಡಿ….!

ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಚಿತ್ರ ವಿಚಿತ್ರ ವೀಡಿಯೊಗಳು ಹರಿದಾಡುತ್ತಲೇ ಇರುತ್ತವೆ. ಅದರಲ್ಲೂ ಜಾದೂಗೆ ಸಂಬಂಧಪಟ್ಟ ವಿಡಿಯೋಗಳಂತೂ ಸಿಕ್ಕಾಪಟ್ಟೆ ವೈರಲ್‌ ಆಗುತ್ತವೆ. ಜಾದೂಗಾರರ ಚಮತ್ಕಾರಗಳು ಜನರಿಗೆ ಮೋಡಿ ಮಾಡುತ್ತವೆ. ಕೆಲವರು ಇದನ್ನು ಕೈಚಳಕ ಎಂದು ಕರೆದ್ರೆ, ಇನ್ನು ಕೆಲವರು ಕಲೆಯೆಂದು ಆರಾಧಿಸ್ತಾರೆ.  ಇದೀಗ ಅಂಥದ್ದೇ ಚಮತ್ಕಾರದ ಫ್ಲಾಪ್‌ ಶೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

ಜಾದೂಗಾರನ ಅಸಲಿಯತ್ತನ್ನು ಯುವಕನೊಬ್ಬ ಬಯಲಿಗೆಳೆದಿದ್ದಾನೆ. ಈ ವೀಡಿಯೊವನ್ನು Twitterನಲ್ಲಿ ಹಂಚಿಕೊಳ್ಳಲಾಗಿದೆ. ಮ್ಯಾಜಿಕ್‌ ಬ್ರೋಕನ್‌ ಹೆಸರಿನಲ್ಲಿ ಇದು ವೈರಲ್‌ ಆಗ್ತಿದೆ. ಜಾದೂಗಾರನೊಬ್ಬ ಸಾಕಷ್ಟು ಜನರನ್ನು ಕೂಡಿಹಾಕಿ ಮ್ಯಾಜಿಕ್ ತೋರಿಸುತ್ತಿದ್ದ. ಬಾಲಕಿಯೊಬ್ಬಳನ್ನು ಟೇಬಲ್‌ ಮೇಲೆ ಮಲಗಿಸಿ ಸೊಂಟವನ್ನೇ ಕಟ್‌ ಮಾಡಿದಂತೆ ಚಮತ್ಕಾರವನ್ನಾತ ತೋರಿಸಿದ್ದ. ಕತ್ತರಿಸಿದ ಬಳಿಕವೂ ಬಾಲಕಿಯ ಕೆಳಭಾಗದ ದೇಹ ಅತ್ತಿಂದಿತ್ತ ಚಲಿಸುತ್ತಿತ್ತು. ಆ ಹುಡುಗಿಯ ಪಾದಗಳು ಮಾತ್ರ ಗೋಚರಿಸುತ್ತಿದ್ದವು, ದೇಹದ ಮೇಲ್ಭಾಗ ಮಾಯವಾಗಿತ್ತು.

ಕೆಲಕಾಲ ಈ ಮಾಯಾಜಾಲವನ್ನು ಕಂಡು ಜನರು ಬೆರಗಾಗಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಅಲ್ಲಿನ ಪರಿಸ್ಥಿತಿಯೇ ಬೇರೆಯಾಗಿ ಹೋಗಿತ್ತು.  ಜನರ ನಡುವಿನಿಂದ ಎದ್ದು ಬಂದ ಹುಡುಗನೊಬ್ಬ ಟೇಬಲ್‌ ಕೆಳಗೆ ಅಡಗಿದ್ದ ಹುಡುಗಿಯನ್ನು ಹೊರಕ್ಕೆ ಎಳೆದಿದ್ದಾನೆ. ಜನರನ್ನು ಮರುಳು ಮಾಡುತ್ತಿದ್ದ ಜಾದೂಗಾರನ ಅಸಲಿಯತ್ತು ಅಲ್ಲಿ ಬಯಲಾಗಿದೆ. ಜಾದೂ ನೋಡಲು ಬಂದಿದ್ದವರೆಲ್ಲ ಆತನ ಮೇಲೆ ಸಿಕ್ಕ ವಸ್ತುಗಳನ್ನು ಕೋಪದಿಂದ ಎಸೆಯಲಾರಂಭಿಸಿದ್ದಾರೆ. ವೀಡಿಯೋ ವೈರಲ್ ಆಗ್ತಿದ್ದಂತೆ ಆತ ಸಾಕಷ್ಟು ಟ್ರೋಲ್‌ಗೂ ತುತ್ತಾಗಿದ್ದಾನೆ.

https://twitter.com/Enezator/status/1632719046385758210?ref_src=twsrc%5Etfw%7Ctwcamp%5Etweetembed%7Ctwterm%5E1632719046385758210%7Ctwgr%5Ed77357f09bf3bef354b85d86f37444b0158d7d25%7Ctwcon%5Es1_&ref_url=https%3A%2F%2Fzeenews.india.com%2Fhindi%2Foff-beat%2Fmagician-exposed-by-boy-while-showing-girl-cutting-from-waist-among-the-public%2F1600897

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read