HomeKarnatakaಬಸ್ ನಲ್ಲಿ ಸಿಕ್ಕ 30,000 ರೂ. ಮರಳಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್

ಬಸ್ ನಲ್ಲಿ ಸಿಕ್ಕ 30,000 ರೂ. ಮರಳಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್

ಪ್ರಾಮಾಣಿಕತೆ ಮರೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ವರದಿಯಾಗುವ ಕೆಲವೊಂದು ಘಟನೆಗಳು ಮತ್ತೆ ಮಾನವೀಯತೆ ಹಾಗೂ ಪ್ರಾಮಾಣಿಕತೆ ಮೇಲೆ ವಿಶ್ವಾಸ ಮೂಡಿಸುತ್ತದೆ. ಅಂತವುದೇ ಒಂದು ಘಟನೆ ಈಗ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ಕಂಡಕ್ಟರ್ ಒಬ್ಬರು ಬಸ್ ನಲ್ಲಿ ತಮಗೆ ಸಿಕ್ಕ 30,000 ರೂಪಾಯಿಗಳನ್ನು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಹಣ ಕಳೆದುಕೊಂಡಿದ್ದ ಭದ್ರಾವತಿ ತಾಲೂಕಿನ ಬಂಡಿಗುಡ್ಡದ ಆಯಿಷಮ್ಮ ಅವರ ಮೊಗದಲ್ಲಿ ಈಗ ಸಂತಸ ಮೂಡಿದೆ.

ಆಯಿಷಮ್ಮ ಬಂಡಿಗುಡ್ಡದಿಂದ ಭದ್ರಾವತಿಗೆ ತೆರಳುವ ವೇಳೆ ಹಣವನ್ನು ಬಸ್ಸಿನಲ್ಲಿಯೇ ಮರೆತು ಇಳಿದಿದ್ದರು. ಇದು ಕಂಡಕ್ಟರ್ ರವಿ ಅವರ ಗಮನಕ್ಕೆ ಬಂದಿದ್ದು, ಬಳಿಕ ಮಹಿಳೆಯನ್ನು ಪತ್ತೆ ಮಾಡಿ ಚಾಲಕ ರಾಜು ಮತ್ತು ಸಂಚಾರಿ ನಿಯಂತ್ರಕ ಪುರುಷೋತ್ತಮ್ ಅವರ ಸಮ್ಮುಖದಲ್ಲಿ ಹಣ ಹಿಂದಿರುಗಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular