ಫ್ರಿಜ್ ನಲ್ಲಿಟ್ಟ ನೀರು ಕುಡಿಯುವುದರಿಂದ ಏನಾಗುತ್ತೆ ಗೊತ್ತಾ…..?

Should you drink warm or cold water when you wake up? Experts weigh in

ಬೇಸಿಗೆಯಲ್ಲಿ ಹೆಚ್ಚು ತಣ್ಣನೆಯ ನೀರು ಸೇವಿಸಲು ಇಚ್ಛಿಸುತ್ತೇವೆ. ಆದರೆ ತಣ್ಣನೆಯ ನೀರು ಕುಡಿಯುವುದು ತಪ್ಪಲ್ಲ. ಆದರೆ ಫ್ರಿಜ್ ನಲ್ಲಿಟ್ಟಿರುವ ನೀರು ಕುಡಿಯುವುದು ತಪ್ಪು. ಇದು ನಮ್ಮ ದೇಹದ ಆರೋಗ್ಯಕ್ಕೆ ಅಷ್ಟಾಗಿ ಒಳ್ಳೆಯದಲ್ಲ. ಬಿಸಿಲ ಧಗೆಗೆ ತಣ್ಣನೆಯ ನೀರು ಹಿತವೆನಿಸಬಹುದು. ಆದ್ರೆ ಫ್ರಿಜ್ ನಲ್ಲಿಟ್ಟ ನೀರು ಆರೋಗ್ಯಕ್ಕೆ ಹಾನಿಕರ.

* ಆಹಾರ ಸೇವಿಸಿದ ತಕ್ಷಣ ಕುಡಿಯುವ ತಣ್ಣನೆಯ ನೀರು ಜೀರ್ಣಕ್ರಿಯೆಗೆ ಅಡ್ಡಿಯುಂಟು ಮಾಡುತ್ತದೆ. ಇದರಿಂದ ಚಯಾಪಚಯ ಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

* ಸದಾ ಕೋಲ್ಡ್ ವಾಟರ್ ಕುಡಿಯುವುದರಿಂದ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.

* ತಣ್ಣನೆಯ ನೀರು ಕುಡಿಯುವುದರಿಂದ ಮಲಬದ್ಧತೆ ಹಾಗೂ ಗ್ಯಾಸ್ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.

* ಹೃದಯದ ವೇಗಸ್ ನರದ ಮೇಲೆ ತಣ್ಣನೆಯ ನೀರು ಪರಿಣಾಮ ಬೀರುತ್ತದೆ. ಇದರಿಂದಾಗಿ ಹೃದಯ ಬಡಿತದ ವೇಗ ಕಡಿಮೆಯಾಗುತ್ತದೆ. ಇದು ಹೃದಯಾಘಾತದ ಅಪಾಯಕ್ಕೆ ದಾರಿ ಮಾಡಿ ಕೊಡುತ್ತದೆ.

* ತಣ್ಣನೆಯ ನೀರು ಕುಡಿಯುವುದರಿಂದ ವಸಡಿನ ನೋವು ಪ್ರಾರಂಭವಾಗುತ್ತದೆ. ಹಲ್ಲುಗಳು ಸಡಿಲವಾಗುವ ಸಾಧ್ಯತೆ ಹೆಚ್ಚಿರುತ್ತದೆ.

* ತಣ್ಣನೆಯ ನೀರು ಕುಡಿಯುವುದರಿಂದ ಗಂಟಲಿನ ರಕ್ಷಣಾತ್ಮಕ ಪದರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಇದರಿಂದಾಗಿ ಗಂಟಲಿನ ಸೋಂಕು ಕಾಣಿಸಿಕೊಳ್ಳುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read