ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮಿಸಿದ್ದು, ಭಾನುವಾರದಂದು ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಬಾಯ್ ಜೊತೆ ಸ್ಕೂಟರ್ ಸವಾರಿ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಬೆಂಗಳೂರಿನ ಏರ್ ಲೈನ್ಸ್ ಹೋಟೆಲ್ ನಲ್ಲಿ ತಿಂಡಿ ಸವಿದು ಹೊರಬಂದ ರಾಹುಲ್, ತಮಗೆ ಎದುರಾದ ಫುಡ್ ಡೆಲಿವರಿ ಬಾಯ್ ಬಳಿ ಡ್ರಾಪ್ ಕೇಳಿದ್ದಾರೆ. ಇದರಿಂದ ಒಂದು ಕ್ಷಣ ಡೆಲಿವರಿ ಬಾಯ್ ತಬ್ಬಿಬ್ಬಾಗಿದ್ದು ಬಳಿಕ ರಾಹುಲ್ ಅವರನ್ನು ತಮ್ಮ ವಾಹನಕ್ಕೆ ಹತ್ತಿಸಿಕೊಂಡಿದ್ದಾರೆ.
ನಿಯಮದಂತೆ ಹಿಂಬದಿ ಸವಾರ ರಾಹುಲ್ ಕೂಡಾ ಹೆಲ್ಮೆಟ್ ಧರಿಸಿದ್ದು, ಬೆಂಗಾವಲು ಪಡೆಯ ರಕ್ಷಣೆ ಇಲ್ಲದೆ ಶ್ರೀಸಾಮಾನ್ಯರಂತೆ ಸ್ಕೂಟರ್ ಸವಾರಿ ಮಾಡಿರುವ ರಾಹುಲ್ ಗಾಂಧಿಯವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
https://twitter.com/TOIBengaluru/status/1655141335601643522?ref_src=twsrc%5Etfw%7Ctwcamp%5Etweetembed%7Ctwterm%5E1655141335601643522%7Ctwgr%5E9c374f15afc2bb55169aa371f0cc2516b1e464be%7Ctwcon%5Es1_&ref_url=https%3A%2F%2Ftimesofindia.indiatimes.com%2Felections%2Fassembly-elections%2Fkarnataka%2Fnews%2Frahul-gandhi-takes-scooter-ride-with-delivery-boy-in-bengaluru-discusses-minimum-wages-and-corruption%2Farticleshow%2F100055069.cms