
ಅರೆ..! ಇದೇನಿದು ಪ್ರೆಶರ್ ಕುಕ್ಕರ್ನಲ್ಲಿ ಚಪಾತಿ ಮಾಡೋಕೆ ಸಾಧ್ಯವೇ ಎಂಬ ಪ್ರಶ್ನೆ ಇದೀಗ ನಿಮ್ಮನ್ನ ಕಾಡಿದ್ದಿರಬಹುದು. ಆದರೆ ಈ ಪ್ರಶ್ನೆಗೆ ಹುಂ ಎಂಬ ಉತ್ತರವನ್ನ ನೀಡ್ತಿದೆ ಈ ವಿಡಿಯೋ. ಚಪಾತಿಯನ್ನ ಲಟ್ಟಿಸಿದ ಬಳಿಕ ಅದನ್ನ ತವಾದಲ್ಲಿ ಹಾಕುವ ಬದಲು ಮೂರು ನಿಮಿಷಗಳ ಕಾಲ ಕುಕ್ಕರ್ನಲ್ಲಿ ಇಟ್ಟು ಬೇಯಿಸಲಾಗಿದೆ. ಚಪಾತಿ ತುಂಬಾ ಒಳ್ಳೆಯ ರೀತಿಯಲ್ಲೇ ಮೂಡಿ ಬಂದಿದೆ.
ಆದರೆ ಇದೇನು ಹೊಸದಾಗಿ ಮಾಡಿದ ಪ್ರಯತ್ನವೇನಲ್ಲ. ನೀವೇನಾದರೂ ಪ್ರೆಶರ್ ಕುಕ್ಕರ್ನಲ್ಲಿ ಚಪಾತಿ ಮಾಡೋದು ಹೇಗೆ ಎಂಬ ಪ್ರಶ್ನೆಯನ್ನ ಗೂಗಲ್ಗೆ ಕೇಳಿದ್ರೆ ತರಹೇವಾರಿ ವಿಡಿಯೋಗಳು ನಿಮ್ಮ ಕಣ್ಮುಂದೆ ಬರಲಿದೆ. ಅಂದ ಹಾಗೆ ನೀವು ಈ ರೀತಿ ಚಪಾತಿ ಮಾಡೋ ಬಗ್ಗೆ ಯೋಚಿಸುತ್ತಿದ್ದೀರಾ..?

