ಪ್ರೆಶರ್​ ಕುಕ್ಕರ್​ನಲ್ಲಿ ತಯಾರಾಯ್ತು ಗರಿ ಗರಿ ಚಪಾತಿ…! ಹಳೆ ವಿಡಿಯೊ ಮತ್ತೊಮ್ಮೆ ನೋಡಿ

ಚಪಾತಿಯನ್ನ ಮಾಡೋಕೆ ಚಪಾತಿ ಮಣೆ, ಲಟ್ಟಣಿಗೆ ಅವಶ್ಯಕತೆ ಇದೆ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರಾನೇ. ಹಾಗೆ ಬೇಯಿಸಲು ತವಾದ ಅವಶ್ಯಕತೆ ಇದೆ. ಆದರೆ ಎಂದಾದರೂ ಪ್ರೆಶರ್​ ಕುಕ್ಕರ್​ನಲ್ಲಿ ಚಪಾತಿಯನ್ನ ಬೇಯಿಸಿದ್ದೀರಾ…..?

ಅರೆ..! ಇದೇನಿದು ಪ್ರೆಶರ್​ ಕುಕ್ಕರ್​ನಲ್ಲಿ ಚಪಾತಿ ಮಾಡೋಕೆ ಸಾಧ್ಯವೇ ಎಂಬ ಪ್ರಶ್ನೆ ಇದೀಗ ನಿಮ್ಮನ್ನ ಕಾಡಿದ್ದಿರಬಹುದು. ಆದರೆ ಈ ಪ್ರಶ್ನೆಗೆ ಹುಂ ಎಂಬ ಉತ್ತರವನ್ನ ನೀಡ್ತಿದೆ ಈ ವಿಡಿಯೋ. ಚಪಾತಿಯನ್ನ ಲಟ್ಟಿಸಿದ ಬಳಿಕ ಅದನ್ನ ತವಾದಲ್ಲಿ ಹಾಕುವ ಬದಲು ಮೂರು ನಿಮಿಷಗಳ ಕಾಲ ಕುಕ್ಕರ್​ನಲ್ಲಿ ಇಟ್ಟು ಬೇಯಿಸಲಾಗಿದೆ. ಚಪಾತಿ ತುಂಬಾ ಒಳ್ಳೆಯ ರೀತಿಯಲ್ಲೇ ಮೂಡಿ ಬಂದಿದೆ.

ಆದರೆ ಇದೇನು ಹೊಸದಾಗಿ ಮಾಡಿದ ಪ್ರಯತ್ನವೇನಲ್ಲ. ನೀವೇನಾದರೂ ಪ್ರೆಶರ್​ ಕುಕ್ಕರ್​ನಲ್ಲಿ ಚಪಾತಿ ಮಾಡೋದು ಹೇಗೆ ಎಂಬ ಪ್ರಶ್ನೆಯನ್ನ ಗೂಗಲ್​ಗೆ ಕೇಳಿದ್ರೆ ತರಹೇವಾರಿ ವಿಡಿಯೋಗಳು ನಿಮ್ಮ ಕಣ್ಮುಂದೆ ಬರಲಿದೆ. ಅಂದ ಹಾಗೆ ನೀವು ಈ ರೀತಿ ಚಪಾತಿ ಮಾಡೋ ಬಗ್ಗೆ ಯೋಚಿಸುತ್ತಿದ್ದೀರಾ..?

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read