ಪ್ರಯಾಣಿಕರೇ ಗಮನಿಸಿ: ಬೆಂಗಳೂರಿನಿಂದ ಒಡಿಶಾಗೆ ರೈಲು ಸೇವೆ ಮತ್ತೆ ಆರಂಭ

ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತದ ಬಳಿಕ ಬೋಗಿಗಳ ಕಾರ್ಯಾಚರಣೆ ಮುಗಿದಿದ್ದು, ಬೆಂಗಳೂರಿಂದ ಒಡಿಶಾಗೆ ರೈಲು ಸೇವೆ (train service) ಮತ್ತೆ ಆರಂಭವಾಗಿದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ.

ಸ್ಥಗಿತಗೊಂಡಿದ್ದ ರೈಲು ಸೇವೆ ಪುನಃ ಆರಂಭವಾಗಿದ್ದು (Train service has resumed)
ಬೆಂಗಳೂರಿಂದ ಇಂದು ಒಡಿಶಾಗೆ ಮೂರು ರೈಲುಗಳು ಹೊರಡಲಿವೆ. ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ರೈಲುಗಳು ಸೇವೆ ಮತ್ತೆ ಆರಂಭಿಸಲಿದೆ. ಬೆಳಗ್ಗೆ 7:30ಕ್ಕೆ ಹೊರಡಬೇಕಿದ್ದ ಜೆಸ್ಸಿದ್ ಎಕ್ಸ್ಪ್ರೆಸ್ 12:30ಕ್ಕೆ ಹೊರಟಿದೆ. 10:30ಕ್ಕೆ ಹೊರಡಬೇಕಿದ್ದ ಬೆಂಗಳೂರು-ಹೌರಾ ಸೂಪರ್ ಫಾಸ್ಟ್ 1 ಗಂಟೆಗೆ ಬೆಂಗಳೂರು ನಿಲ್ದಾಣದಿಂದ ಹೊರಟಿದೆ.

ರೈಲು ದುರಂತದಿಂದ ಸ್ಥಗಿತಗೊಂಡಿದ್ದ ರೈಲು ಸೇವೆ ಪುನಃ ಆರಂಭವಾಗಿದ್ದು ಸಾರ್ವಜನಿಕರು ರೈಲು ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ. ಒಡಿಶಾ ರೈಲು ದುರಂತದಲ್ಲಿ (In a train accident) 280 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರು ಗಂಭೀರ ಗಾಯಗಳಿಂದ ನರಳುತ್ತಿದ್ದಾರೆ. ಭೀಕರ ರೈಲು ಅಪಘಾತದಲ್ಲಿ ಕನಿಷ್ಠ 288 ಜನರು ಸಾವನ್ನಪ್ಪಿದ್ದಾರೆ ಮತ್ತು 1,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read