HomeHealthಪುರುಷರಲ್ಲಿ ವೀರ್ಯವೃದ್ಧಿ ಮಾಡುತ್ತದೆ ಖರ್ಜೂರ

ಪುರುಷರಲ್ಲಿ ವೀರ್ಯವೃದ್ಧಿ ಮಾಡುತ್ತದೆ ಖರ್ಜೂರ

8 Proven Health Benefits of Dates

ಫೈಬರ್ ಭರಿತ ಖರ್ಜೂರವು ದೇಹದಲ್ಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಖರ್ಜೂರ ತಿನ್ನುವುದರಿಂದ ಹೊಟ್ಟೆ ನೋವು, ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಖರ್ಜೂರ ರಾಮಬಾಣವೆಂದು ಸಾಬೀತಾಗಿದೆ. ಖರ್ಜೂರದಲ್ಲಿ ಕಂಡುಬರುವ ಕಬ್ಬಿಣವು ನಮ್ಮ ದೇಹದಲ್ಲಿನ ಖನಿಜಗಳ ಕೊರತೆಯನ್ನು ನೀಗಿಸುತ್ತದೆ. ರಕ್ತ ರಚನೆಗೆ ಸಹಾಯ ಮಾಡುತ್ತದೆ. ನೈಸರ್ಗಿಕ ಸಿಹಿಕಾರಕವು ಖರ್ಜೂರದಲ್ಲಿ ಕಂಡುಬರುತ್ತದೆ.

ಆದರೆ ಮಧುಮೇಹದಿಂದ ಬಳಲುತ್ತಿರುವವರು ಖರ್ಜೂರವನ್ನು ಹೆಚ್ಚು ಸೇವಿಸಬಾರದು. ನೀವು ಯಾವಾಗ ಬೇಕಾದರೂ ಖರ್ಜೂರವನ್ನು ತಿನ್ನಬಹುದು, ಆದರೆ ರಾತ್ರಿ ಅಥವಾ ಬೆಳಗ್ಗೆ ಇದನ್ನು ತಿನ್ನುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಸಾಧ್ಯವಾದರೆ ಹಾಲಿನೊಂದಿಗೆ ನೆನೆಸಿದ ಖರ್ಜೂರವನ್ನು ರಾತ್ರಿ ತಿನ್ನಬೇಕು. ಆ ಹಾಲನ್ನೂ  ಕುಡಿಯಬೇಕು. ಇದರಿಂದ ವಿಶೇಷವಾಗಿ ಪುರುಷರಿಗೆ ಪ್ರಯೋಜನವಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯ ಹೊರತಾಗಿ ಖರ್ಜೂರವು ಪುರುಷರಲ್ಲಿ ವೀರ್ಯದ ಸಂಖ್ಯೆಯನ್ನು ಹೆಚ್ಚಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದನ್ನು ಸೇವಿಸುವುದರಿಂದ ಪುರುಷರಲ್ಲಿ ತ್ರಾಣ ಹೆಚ್ಚುತ್ತದೆ. ಲೈಂಗಿಕ ಸಂಬಂಧದ ವೇಳೆ ದುರ್ಬಲತೆ ಕಾಡುವುದಿಲ್ಲ. ಖರ್ಜೂರವನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಲಾಭ ಸಿಗುತ್ತದೆ. ಇದಲ್ಲದೇ ನೆನಪಿನ ಶಕ್ತಿಯನ್ನೂ ಇದು ಚುರುಕುಗೊಳಿಸುತ್ತದೆ. ಇದರಲ್ಲಿರುವ ಎಂಟಿಒಕ್ಸಿಡೆಂಟ್‌ಗಳು ಅನೇಕ ಅಪಾಯಕಾರಿ ಕಾಯಿಲೆಗಳಿಂದ ರಕ್ಷಣೆ ನೀಡುತ್ತವೆ. ಖರ್ಜೂರದ ಸೇವನೆಯು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಋತುಮಾನದ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಚಳಿಗಾಲದಲ್ಲಿ ಖರ್ಜೂರವನ್ನು ತಿನ್ನುವ ಮೂಲಕ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಬಹುದು. ನಾವು ಅನಾರೋಗ್ಯಕ್ಕೂ ತುತ್ತಾಗುವುದಿಲ್ಲ. ಖರ್ಜೂರ ಪುರುಷರಲ್ಲಿ ಅಕಾಲಿಕ ಸ್ಖಲನದ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಇದರಲ್ಲಿರುವ ಫ್ಲೇವನಾಯ್ಡ್‌ಗಳು ಮಧುಮೇಹ, ಅಲ್ಝೈಮರ್ ಮತ್ತು ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ.

For Latest News Updates, Join Our Whatsapp Community🚩
RELATED ARTICLES

Most Popular