ಪರ್ಸ್ ನಲ್ಲಿ ʼಹಣʼ ಸದಾ ಇರಬೇಕೆಂದಾದ್ರೆ ಹೀಗೆ ಮಾಡಿ

ಇಂದು ಸಾಮಾನ್ಯವಾಗಿ ಎಲ್ಲರೂ ಹಣ ಗಳಿಸುವುದಕ್ಕಾಗಿಯೇ ತಮ್ಮ ಜೀವನದ ಅಮೂಲ್ಯ ಸಮಯವನ್ನು ಮೀಸಲಿಡುತ್ತಾರೆ. ಪ್ರತಿದಿನ ದುಡಿದಿದ್ದು ಕಾಣುತ್ತದೆ. ಆದ್ರೆ ಹಣ ಮಾತ್ರ ಕೈನಲ್ಲಿ ಇರುವುದಿಲ್ಲ. ಇದು ಎಲ್ಲರನ್ನೂ ಕಾಡುವ ಸಮಸ್ಯೆ.

ಜನರು ಅಗತ್ಯವಾಗಿ ಬೇಕಾಗುವ ವಸ್ತುಗಳನ್ನು ತಮ್ಮ ಪರ್ಸಿನಲ್ಲಿಟ್ಟುಕೊಂಡು ಹೋಗುತ್ತಾರೆ. ಎಟಿಎಂ, ಲೈಸೆನ್ಸ್ ಹೀಗೆ ಅವಶ್ಯವಿರುವ ವಸ್ತುಗಳು ಪರ್ಸ್ ನಲ್ಲಿರುತ್ತವೆ. ಆದ್ರೆ ಕೆಲವರ ಪರ್ಸ್ ನಲ್ಲಿ ಹಣ ಮಾತ್ರ ಇರುವುದಿಲ್ಲ. ಪರ್ಸ್ ನಲ್ಲಿ ಹಣವಿದ್ದರೆ ಬೇಗ ಖಾಲಿಯಾಗುತ್ತದೆ. ಹಾಗಾಗಿ ಹಣ ಇಡುವುದಿಲ್ಲ ಎನ್ನುತ್ತಾರೆ ಕೆಲವರು.

ಜ್ಯೋತಿಷ್ಯ ಶಾಸ್ತ್ರ ಮಾತ್ರ ಇದು ತಪ್ಪು ಎನ್ನುತ್ತದೆ. ಶಾಸ್ತ್ರದ ಪ್ರಕಾರ ಪರ್ಸ್ ನಲ್ಲಿ ಹಣ ಇರಬೇಕು. ಪರ್ಸ್ ನಲ್ಲಿ ದೇವಿ ಲಕ್ಷ್ಮಿಯ ಫೋಟೋ ಇರಬೇಕು. ಹೀಗೆ ಮಾಡುವುದರಿಂದ ಎಲ್ಲಿಂದಾದ್ರೂ ನಿಮ್ಮ ಪರ್ಸ್ ಗೆ ಹಣ ಬರುತ್ತದೆಯಂತೆ. ಹೀಗಿದ್ದು ಪರ್ಸ್ ನಲ್ಲಿದ್ದ ಹಣ ಖಾಲಿಯಾಗ್ತಾ ಇದ್ದರೆ, ಸ್ವಲ್ಪ ಪ್ರಮಾಣದ ಹಣವನ್ನು ಮಾತ್ರ ಪರ್ಸ್ ನಲ್ಲಿಡಿ. ಹೀಗೆ ಮಾಡುವುದರಿಂದ ಜಾಸ್ತಿ ಹಣ ಖರ್ಚಾಗುವುದನ್ನು ತಪ್ಪಿಸಬಹುದು.

ನಿಮ್ಮ ಪರ್ಸ್ ನಲ್ಲಿ ಸದಾ ಹಣ ಇರಬೇಕೆಂದು ನೀವು ಬಯಸುವುದಾದರೆ ವಾಸ್ತು ಪ್ರಕಾರ ಕೆಲವೊಂದು ವಸ್ತುಗಳು ನಿಮ್ಮ ಪರ್ಸ್ ನಲ್ಲಿರಬಾರದು. ಅದ್ರಲ್ಲಿ ತಿಂಡಿ ಕೂಡ ಒಂದು. ನಿಮ್ಮ ಪರ್ಸ್ ನಲ್ಲಿ ಧಾರ್ಮಿಕವಾದ ಹಾಗೂ ಪವಿತ್ರವಾದ ವಸ್ತುವನ್ನು ಇಡಿ. ಹೆಚ್ಚುವರಿಯಾಗಿ ನೀವು ರುದ್ರಾಕ್ಷಿಯನ್ನು ಕೂಡ ಇಟ್ಟುಕೊಳ್ಳಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read