HomeEntertainmentಪತಿ ಜೊತೆಗಿರುವ ಮತ್ತೊಂದು ಫೋಟೋ ಹಂಚಿಕೊಂಡ ನಟಿ ಮಹಾಲಕ್ಷ್ಮಿ...! ನೆಟ್ಟಿಗರಿಂದ ಮತ್ತೆ ಟ್ರೋಲ್

ಪತಿ ಜೊತೆಗಿರುವ ಮತ್ತೊಂದು ಫೋಟೋ ಹಂಚಿಕೊಂಡ ನಟಿ ಮಹಾಲಕ್ಷ್ಮಿ…! ನೆಟ್ಟಿಗರಿಂದ ಮತ್ತೆ ಟ್ರೋಲ್

ನಟಿ ಮಹಾಲಕ್ಷ್ಮಿ, ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಜೊತೆ ವಿವಾಹವಾದಾಗಿನಿಂದಲೂ ಪದೇ ಪದೇ ಟ್ರೋಲ್ ಗೆ ಒಳಗಾಗುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಜೋಡಿ ತಮ್ಮದೇ ಪ್ರಪಂಚದಲ್ಲಿ ಆನಂದವಾಗಿದೆ.

ಇದರ ಜೊತೆಗೆ ನಟಿ ಮಹಾಲಕ್ಷ್ಮಿ ಪತಿ ಜೊತೆಗಿರುವ ಫೋಟೋಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದು, ಇದಕ್ಕೆ ನೆಗೆಟಿವ್ ಕಾಮೆಂಟ್ ಗಳ ರಾಶಿಯೇ ಬರುತ್ತಿದೆ. ಆದರೆ ಇದರಿಂದ ಕುಗ್ಗದ ಮಹಾಲಕ್ಷ್ಮಿ ಮತ್ತಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಪತಿಯೊಂದಿಗಿರುವ ತನ್ನ ಫೋಟೋವನ್ನು ಹಾಕಿಕೊಂಡಿದ್ದ ಮಹಾಲಕ್ಷ್ಮಿ ‘ನಾವು ಮೇಡ್ ಫಾರ್ ಈಚ್ ಅದರ್ ಅಲ್ಲ, ಮ್ಯಾಡ್ ಫಾರ್ ಈಚ್ ಅದರ್’ ಎಂದು ಬರೆದುಕೊಂಡಿದ್ದರು. ಇದಕ್ಕೂ ಕೆಲವರು ವ್ಯಂಗ್ಯವಾಡಿದ್ದರು. ಇದೀಗ ಮಹಾಲಕ್ಷ್ಮಿ ಮತ್ತೊಂದು ಫೋಟೋ ಹಂಚಿಕೊಂಡಿದ್ದು ಅದಕ್ಕೂ ಸಹ ಗೇಲಿ ಮಾಡಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular