ನೆಲದ ಮೇಲೆ ಕುಳಿತು ಕೆಲಸ ಮಾಡಿ; ಇದರಲ್ಲಿವೆ ಅದ್ಭುತ ಪ್ರಯೋಜನ….!

ಪ್ರತಿ ಮನೆಗಳಲ್ಲೂ ಈಗ ಕುರ್ಚಿ, ಸೋಫಾ ಇದ್ದೇ ಇರುತ್ತದೆ. ಹಾಗಾಗಿ ನೆಲದ ಮೇಲೆ ಯಾರೂ ಕುಳಿತುಕೊಳ್ಳುವುದೇ ಇಲ್ಲ. ಹಿಂದಿನ ಕಾಲದಲ್ಲಿ ಎಲ್ಲರೂ ನೆಲದ ಮೇಲೆ ಕುಳಿತೇ ಆಹಾರ ಸೇವಿಸುತ್ತಿದ್ದರು. ಇತರ  ಕೆಲಸಗಳನ್ನು ಮಾಡುತ್ತಿದ್ದರು.

ನೆಲದ ಮೇಲೆ ಕುಳಿತು ಕೆಲಸ ಮಾಡುವುದು ಅಥವಾ ತಿನ್ನುವುದು ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ನೆಲದ ಮೇಲೆ ಕುಳಿತು ಕೆಲಸ ಮಾಡುವುದರಿಂದ ಯಾವ ರೀತಿಯ ಲಾಭಗಳಿವೆ ಅನ್ನೋದನ್ನು ನೋಡೋಣ.

ದೇಹದ ಭಂಗಿ ಸುಧಾರಣೆ : ಸ್ವಲ್ಪ ಹೊತ್ತು ನೆಲದ ಮೇಲೆ ಕುಳಿತರೆ ನಮ್ಮ ದೇಹದ ಭಂಗಿ ಸರಿಯಾಗುತ್ತದೆ. ಕುರ್ಚಿಯ ಮೇಲೆ ಕುಳಿತುಕೊಳ್ಳುವುದು ನಮ್ಮ ಭಂಗಿಯನ್ನು ಹಾಳು ಮಾಡುತ್ತದೆ.

ಏಕೆಂದರೆ ನೆಲದ ಮೇಲೆ ಕುಳಿತಾಗ ಭುಜಗಳು ಹಿಂದಕ್ಕೆ ಹೋಗುತ್ತವೆ. ಇದು ಸುತ್ತಮುತ್ತಲಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಆದ್ದರಿಂದ  ನಿಮ್ಮ ದೇಹದ ಭಂಗಿ ಉತ್ತಮವಾಗಿರಲು ಪ್ರತಿದಿನ ಸ್ವಲ್ಪ ಸಮಯ ನೆಲದ ಮೇಲೆ ಕುಳಿತುಕೊಳ್ಳಬೇಕು.

ದೇಹದಲ್ಲಿ ನಮ್ಯತೆ : ಸ್ವಲ್ಪ ಸಮಯ ನೆಲದ ಮೇಲೆ ಕುಳಿತುಕೊಳ್ಳುವುದರಿಂದ ಬೆನ್ನುಹುರಿ ಗಟ್ಟಿಮುಟ್ಟಾಗಿರುತ್ತದೆ. ಇದರಿಂದಾಗಿ ದೇಹದ ನಮ್ಯತೆ ಹೆಚ್ಚಾಗುತ್ತದೆ. ಅದಕ್ಕಾಗಿಯೇ ದಿನಕ್ಕೆ 2 ಗಂಟೆಗಳ ಕಾಲ ನೆಲದ ಮೇಲೆ ಕುಳಿತುಕೊಳ್ಳಬೇಕು. ಇದನ್ನು ಮಾಡುವುದರಿಂದ ನಿಮ್ಮ ದೇಹವು ಫಿಟ್ ಆಗಿ ಉಳಿಯುತ್ತದೆ.

ಜೀರ್ಣಕ್ರಿಯೆ ಸುಧಾರಣೆ : ನೆಲದ ಮೇಲೆ ಕುಳಿತು ಆಹಾರ ಸೇವಿಸುವುದರಿಂದ ಅಥವಾ ಕಛೇರಿಯ ಕೆಲಸ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿರುತ್ತದೆ. ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ.

ಏಕೆಂದರೆ ಆಹಾರ ಸೇವಿಸುವಾಗ ವ್ಯಕ್ತಿಯು ಮುಂದಕ್ಕೆ ಬಾಗಿ ಅದನ್ನು ನುಂಗಲು ಹಿಂದಕ್ಕೆ ಹೋಗುತ್ತಾನೆ, ಇದರಿಂದ ಹೊಟ್ಟೆಯ ಸ್ನಾಯುಗಳು ಒತ್ತಡಕ್ಕೊಳಗಾಗುತ್ತವೆ ಮತ್ತು ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ.

ಮನಸ್ಸು ಚುರುಕಾಗುತ್ತದೆ: ನೆಲದ ಮೇಲೆ ಕುಳಿತು ಆಹಾರವನ್ನು ಸೇವಿಸಿದರೆ ಒತ್ತಡವು ದೂರವಾಗುತ್ತದೆ ಮತ್ತು ಆಮ್ಲಜನಕದ ಹರಿವು ಹೆಚ್ಚಾಗುತ್ತದೆ. ಇದರಿಂದ ಮನಸ್ಸು ಚುರುಕಾಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read