3 ʼಮಂಗಳವಾರʼ ಈ ಕೆಲಸ ಮಾಡಿದ್ರೆ ಸಾಲದ ಸುಳಿಯಿಂದ ಸಿಗುತ್ತೆ ಪರಿಹಾರ

ನಿಮ್ಮ ಜೀವನದಲ್ಲಿ ಸಾಲದ ಸಮಸ್ಯೆ ಕಾಡುತ್ತಿರುತ್ತದೆ. ನೀವು ಪದೇ ಪದೇ ಸಾಲ ತೆಗೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತಿದ್ದರೆ, ಅಥವಾ ಸಾಲ ತೀರಿಸಲು ಆಗದಿದ್ದರೆ, ಕೊಟ್ಟ ಸಾಲ ವಾಪಾಸು ಬರುತ್ತಿಲ್ಲವಾದರೆ ಮಂಗಳವಾರದಂದು ಈ ಪರಿಹಾರವನ್ನು ಮಾಡಿ.

ಅರಳೀಮರಕ್ಕೆ ವಿಶೇಷವಾದ ಶಕ್ತಿ ಇದೆ. ಇದರಲ್ಲಿ ದೇವರು ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಹಾಗಾಗಿ ಇದರ ಮುಂದೆ ಯಾವುದೇ ಸಮಸ್ಯೆಯನ್ನು ಹೇಳಿದರೂ ಅದು ನಿವಾರಣೆಯಾಗುತ್ತದೆಯಂತೆ. ಹಾಗಾಗಿ 3 ಮಂಗಳವಾರದಂದು ಉದ್ದಿನ ಕಾಳಿನಿಂದ ಈ ಚಿಕ್ಕ ಕೆಲಸ ಮಾಡಿ.

ಒಂದು ಕಪ್ ಮೊಸರನ್ನು ತೆಗೆದುಕೊಂಡು ಸಂಕಲ್ಪ ಮಾಡಿಕೊಳ್ಳುತ್ತಾ ಅದಕ್ಕೆ 5 ಉದ್ದಿನ ಕಾಳನ್ನು ಹಾಕಿ, ಬಳಿಕ ಅದನ್ನು ಅರಳೀಮರದ ಬಳಿ ತೆಗೆದುಕೊಂಡು ಹೋಗಿ ಮರದ ಬುಡಕ್ಕೆ ಹಾಕಬೇಕು. ಬಳಿಕ ಮನೆಗೆ ಬರುವಾಗ ತಿರುಗಿ ನೋಡಬಾರದು. ಇದರಿಂದ ನೀವು ಸಾಲದ ಸುಳಿಯಿಂದ ಹೊರಬರಬಹುದು. ಮತ್ತು ಕೊಟ್ಟ ಸಾಲಗಳು ವಾಪಾಸು ಬರುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read