HomeHealthನೀವು ಮಾವಿನ ಹಣ್ಣು ಪ್ರಿಯರೇ ? ದಿನಕ್ಕೆ ಎಷ್ಟು ತಿನ್ನಬಹುದು ಎಂಬುದನ್ನು ಮೊದಲು ತಿಳಿದುಕೊಳ್ಳಿ....!

ನೀವು ಮಾವಿನ ಹಣ್ಣು ಪ್ರಿಯರೇ ? ದಿನಕ್ಕೆ ಎಷ್ಟು ತಿನ್ನಬಹುದು ಎಂಬುದನ್ನು ಮೊದಲು ತಿಳಿದುಕೊಳ್ಳಿ….!

ಬೇಸಿಗೆಯಲ್ಲಿ ರಸಭರಿತವಾದ ಮತ್ತು ತಾಜಾ ಮಾವಿನಹಣ್ಣುಗಳನ್ನು ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಕೆಲವರಿಗೆ ಮಾವಿನ ಹಣ್ಣು ಫೇವರಿಟ್‌. ಊಟದ ಬದಲು ಮಾವಿನ ಹಣ್ಣನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ದಿನಕ್ಕೆ ಹತ್ತಾರು ಮಾವಿನ ಹಣ್ಣು ತಿನ್ನುವವರೂ ಇದ್ದಾರೆ. ಉತ್ತರ ಭಾರತದ ಹಳ್ಳಿಗಳಲ್ಲಿ ಜನರು ಅಂಗಳದಲ್ಲಿ ಮಂಚಗಳನ್ನು ಹಾಕಿಕೊಂಡು ಬಕೆಟ್‌ಗಟ್ಟಲೆ ಮಾವಿನ ಹಣ್ಣುಗಳನ್ನು ತಿನ್ನುತ್ತಾರೆ. ಆದರೆ ಯಾವುದನ್ನೇ ಆದರೂ ಮಿತಿಮೀರಿ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ.

ಹಾಗಾಗಿ ಮಾವಿನ ಹಣ್ಣನ್ನು ಕೂಡ ಅತಿಯಾಗಿ ಸೇವನೆ ಮಾಡಬಾರದು. ಅತಿಯಾಗಿ ಮಾವಿನಹಣ್ಣನ್ನು ತಿಂದರೆ ನಿಮಗೆ ಮಲಬದ್ಧತೆ, ಅಸಿಡಿಟಿಯಂತಹ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಒಂದು ದಿನದಲ್ಲಿ ಎಷ್ಟು ಮಾವಿನ ಹಣ್ಣುಗಳನ್ನು ತಿನ್ನಬೇಕು ಅನ್ನೋದನ್ನು ತಿಳಿಯೋಣ. ಒಂದು ದೊಡ್ಡ ಮಾವಿನ ಹಣ್ಣಿನಲ್ಲಿ 200 ಕ್ಯಾಲೋರಿಗಳಿರುತ್ತವೆ. 100 ಗ್ರಾಂ ಮಾವಿನ ಹಣ್ಣಿನಲ್ಲಿ ಸುಮಾರು 90 ಕ್ಯಾಲೋರಿಗಳಿರುತ್ತವೆ. 50 ರಿಂದ 60 ರಷ್ಟು ವಿಟಮಿನ್-ಸಿ ಮಾವಿನ ಹಣ್ಣಿನಲ್ಲಿ ದೊರೆಯುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಗಾಗಿ ದಿನಕ್ಕೆ ಹೆಚ್ಚೆಂದರೆ ಒಂದರಿಂದ ಎರಡು ಮಾವಿನ ಹಣ್ಣುಗಳನ್ನು ತಿನ್ನಬಹುದು. ಅದಕ್ಕಿಂತ ಜಾಸ್ತಿ ತಿನ್ನುವುದು ಆರೋಗ್ಯಕ್ಕೆ ಮಾರಕವಾಗಬಹುದು. ಮಾವಿನ ಹಣ್ಣಿನಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಾವಿನ ಹಣ್ಣಿನಲ್ಲಿ ಫೈಟೊನ್ಯೂಟ್ರಿಯೆಂಟ್‌ಗಳು ಮತ್ತು ವಿಟಮಿನ್‌ಗಳು ಸಮೃದ್ಧವಾಗಿವೆ. ಇದರಿಂದಾಗಿ ಕರುಳು ಮತ್ತು ಹೊಟ್ಟೆಯ ಬ್ಯಾಕ್ಟೀರಿಯಾಗಳು ವರ್ಧಕವನ್ನು ಪಡೆಯುತ್ತವೆ.

ಕರುಳಿನ ಆರೋಗ್ಯಕ್ಕೆ ಕೇವಲ ಮಾವಿನಹಣ್ಣು ತಿಂದರೆ ಸಾಕಾಗುವುದಿಲ್ಲ. ನೀವು ದಿನಕ್ಕೆ 3-5 ಮಾವಿನಹಣ್ಣುಗಳನ್ನು ತಿಂದರೆ ಹೊಟ್ಟೆಯ ಕರುಳಿನ ಆರೋಗ್ಯವು ಹಾಳಾಗಬಹುದು.

ಮಾವಿನಹಣ್ಣು ತಿನ್ನುವಾಗ ಈ ವಿಷಯ ನೆನಪಿನಲ್ಲಿರಲಿ

ಮಾವು ನಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಅದನ್ನು ಮಿತವಾಗಿ ತಿನ್ನಬೇಕು. ಇದರಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಫೈಬರ್, ವಿಟಮಿನ್-ಸಿ, ವಿಟಮಿನ್-ಎ, ವಿಟಮಿನ್-ಇ, ವಿಟಮಿನ್-ಕೆ, ಪೊಟ್ಯಾಸಿಯಮ್, ಥಯಾಮಿನ್, ತಾಮ್ರ, ಫೋಲೇಟ್, ವಿಟಮಿನ್-ಬಿ6, ರೈಬೋಫ್ಲಾವಿನ್ ಮತ್ತು ಮೆಗ್ನೀಸಿಯಮ್ ಇರುತ್ತದೆ. ಮಾವಿನಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ.

ವಿಟಮಿನ್ ಎ, ಬಿ -6, ಬಿ -12, ಸಿ, ಇ, ವಿಟಮಿನ್ ಕೆ, ವಿಟಮಿನ್ ಡಿ, ಸತು, ರಂಜಕ, ಪೊಟ್ಯಾಸಿಯಮ್, ಫೈಬರ್, ನಿಯಾಸಿನ್, ಥಯಾಮಿನ್, ಕ್ಯಾಲೋರಿಗಳು, ಕಾರ್ಬೋಹೈಡ್ರೇಟ್ಗಳು, ಕೊಬ್ಬು, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ಸಕ್ಕರೆ, ಪ್ರೋಟೀನ್ ಸೇರಿದಂತೆ ಶಕ್ತಿ, ಫೋಲೇಟ್, ತಾಮ್ರ ಕೂಡ ಇದೆ. ಹಾಗಾಗಿ ಇದನ್ನು ಮಿತವಾಗಿ ಸೇವನೆ ಮಾಡಿದರೆ ಮಾತ್ರ ಆರೋಗ್ಯಕ್ಕೆ ಪ್ರಯೋಜನಕಾರಿ.

 

 

For Latest News Updates, Join Our Whatsapp Community🚩
RELATED ARTICLES

Most Popular