ಬೆಂಗಳೂರು: ಕನಕಪುರ ರಸ್ತೆಯ ಸೋಮನಹಳ್ಳಿ, ನೆಲಗುಳಿ, ಕಗ್ಗಲಿಪುರ ಗ್ರಾಮಸ್ಥರಿಗೆ ಒಂದು ತಿಂಗಳೊಳಗೆ ಉಚಿತ ಟೋಲ್ ಪಾಸ್ ವಿತರಿಸುವಂತೆ ಹೈಕೋರ್ಟ್ ಆದೇಶಿಸಿದೆ.
ಸೋಮನಹಳ್ಳಿ ಟೋಲ್ ಪ್ಲಾಜಾದಲ್ಲಿ ನಡೆಯುತ್ತಿರುವ ಟೋಲ್ ಸಂಗ್ರಹ ರಾಷ್ಟ್ರೀಯ ಹೆದ್ದಾರಿ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಹೇಳಿದೆ. ರಾಷ್ಟ್ರೀಯ ಹೆದ್ದಾರಿ ನಿಯಮಗಳ ಪ್ರಕಾರ ಅಥವಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಿಂದ ಕನಿಷ್ಠ 10 ಕಿ.ಮೀ ಗಳ ದೂರದಲ್ಲಿದೆ. ಆದರೆ, ಸೋಮನಹಳ್ಳಿ ಟೋಲ್ 10 ಕಿ.ಮೀ ಒಳಗೆ ಇದೆ. ಸರ್ವಿಸ್ ರಸ್ತೆ ಕೂಡ ಇಲ್ಲ. ಹೀಗಿದ್ದರೂ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವುದು ಅನ್ಯಾಯ ಮತ್ತು ದಬ್ಬಾಳಿಕೆಯಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನಿಯಮಗಳಿಗೆ ವಿರುದ್ಧವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ಸೋಮನಹಳ್ಳಿ, ನೆಲಗುಳಿ ಮತ್ತು ಕಗ್ಗಲಿಪುರ ಗ್ರಾಮಸ್ಥರಿಗೆ ಒಂದು ತಿಂಗಳೊಳಗೆ ಉಚಿತ ಟೋಲ್ ಪಾಸ್ ನೀಡುವಂತೆ ಆದೇಶಿಸಿದೆ.

