HomeKarnatakaನಿಗದಿತ ಅವಧಿಗೂ ಮುನ್ನವೇ ಉತ್ತರ ಪತ್ರಿಕೆ ಕಿತ್ತುಕೊಂಡ ಮೇಲ್ವಿಚಾರಕ; SSLC ವಿದ್ಯಾರ್ಥಿನಿ ದೂರು

ನಿಗದಿತ ಅವಧಿಗೂ ಮುನ್ನವೇ ಉತ್ತರ ಪತ್ರಿಕೆ ಕಿತ್ತುಕೊಂಡ ಮೇಲ್ವಿಚಾರಕ; SSLC ವಿದ್ಯಾರ್ಥಿನಿ ದೂರು

ರಾಜ್ಯದಲ್ಲಿ 10ನೇ ತರಗತಿ ಪರೀಕ್ಷೆಗಳು ನಡೆಯುತ್ತಿದ್ದು, ಸೋಮವಾರದಂದು ಗಣಿತ ಶಾಸ್ತ್ರ ವಿಷಯದ ಪರೀಕ್ಷೆ ನಡೆದಿದೆ.

ಕ್ಲಿಷ್ಟಕರ ವಿಷಯಗಳಲ್ಲಿ ಒಂದಾದ ಗಣಿತ ಪರೀಕ್ಷೆ ಬರೆಯುತ್ತಿದ್ದಾಗ ಕೊಠಡಿಯ ಮೇಲ್ವಿಚಾರಕರೊಬ್ಬರು ನಿಗದಿತ ಅವಧಿಗೂ ಮುನ್ನವೇ ಉತ್ತರ ಪತ್ರಿಕೆ ಪಡೆದುಕೊಂಡಿರುವ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂಜನಗೂಡಿನಲ್ಲಿ ಈ ಘಟನೆ ನಡೆದಿದ್ದು ಪರೀಕ್ಷೆ ಬರೆಯಲು 1.45 ರ ವರೆಗೆ ಸಮಯ ನಿಗದಿಯಾಗಿತ್ತು. ಆದರೆ ಕೊಠಡಿ ಸಂಖ್ಯೆ 13ರ ಮೇಲ್ವಿಚಾರಕರು ಎಲ್ಲ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು 1.30 ಕ್ಕೆ ಕಸಿದುಕೊಂಡಿದ್ದಾರೆ ಎಂದು ಖಾಸಗಿ ಪ್ರೌಢಶಾಲೆ ವಿದ್ಯಾರ್ಥಿನಿಯೊಬ್ಬರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular