HomeEntertainment'ನಾಟು ನಾಟು' ಗೆ ಆಸ್ಕರ್ ಒಲಿದರೆ ವೇದಿಕೆಯಲ್ಲೇ ರಾಮ್ ಚರಣ್ - ಜ್ಯೂ. NTR ನೃತ್ಯ

‘ನಾಟು ನಾಟು’ ಗೆ ಆಸ್ಕರ್ ಒಲಿದರೆ ವೇದಿಕೆಯಲ್ಲೇ ರಾಮ್ ಚರಣ್ – ಜ್ಯೂ. NTR ನೃತ್ಯ

ರಾಜ ಮೌಳಿ ನಿರ್ದೇಶನದ ಜೂನಿಯರ್ ಎನ್.ಟಿ.ಆರ್. – ರಾಮಚರಣ್ ಅಭಿನಯದ ‘ಆರ್ ಆರ್ ಆರ್’ ಚಿತ್ರದ ನಾಟು ನಾಟು ಹಾಡಿಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಂದಿದೆ. ಹೀಗಾಗಿ ಈ ಹಾಡು ಆಸ್ಕರ್ ಗೆಲ್ಲಬಹುದೆಂಬ ನಿರೀಕ್ಷೆ ಹೆಚ್ಚಾಗಿದೆ.

‘ಆರ್ ಆರ್ ಆರ್’ ಚಿತ್ರದ ಇಡೀ ತಂಡ ಈಗ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತಿರುವ ಲಾಸ್ ಏಂಜಲೀಸ್ ನಲ್ಲಿ ಬೀಡು ಬಿಟ್ಟಿದ್ದು, ‘ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಗುತ್ತಿದ್ದಂತೆಯೇ ಸಂಭ್ರಮಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರ ಮಧ್ಯೆ ಮಾತನಾಡಿರುವ ರಾಮ್ ಚರಣ್, ಒಂದು ವೇಳೆ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿಯೂ ಲಭಿಸಿದರೆ ತಾವು ಹಾಗೂ ಜೂನಿಯರ್ ಎನ್.ಟಿ.ಆರ್. ಆಸ್ಕರ್ ವೇದಿಕೆಯಲ್ಲಿ ನೃತ್ಯ ಮಾಡುವುದಾಗಿ ತಿಳಿಸಿದ್ದಾರೆ.

https://www.youtube.com/watch?v=_vktceH8ZA0

For Latest News Updates, Join Our Whatsapp Community🚩
RELATED ARTICLES

Most Popular