‘ನವಿಲು ಗರಿ’ಯನ್ನು ಫೋಟೋ ಫ್ರೇಮ್ ನಲ್ಲಿಟ್ಟು ಚಮತ್ಕಾರ ನೋಡಿ

ಹಿಂದೂ ಧರ್ಮದಲ್ಲಿ ನವಿಲು ಗರಿಗೆ ಮಹತ್ವದ ಸ್ಥಾನವಿದೆ. ಕಾರ್ತಿಕನ ವಾಹನ ನವಿಲು ಎನ್ನಲಾಗಿದೆ. ಇಂದ್ರ ಕೂಡ ನವಿಲುಗರಿ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಿದ್ದನಂತೆ. ಶ್ರೀಕೃಷ್ಣನ ತಲೆ ಮೇಲೂ ನವಿಲು ಗರಿಯಿರುತ್ತದೆ. ನವಿಲು ಗರಿ ಮನೆಯಲ್ಲಿದ್ದರೆ ಸಾಕಷ್ಟು ಲಾಭಗಳಿವೆ. ನವಿಲು ಗರಿ ಮನೆಯ ಸುಖ, ಶಾಂತಿ, ಸಮೃದ್ಧಿಗೆ ಕಾರಣವಾಗುತ್ತದೆ.

ಶುಕ್ರವಾರದ ದಿನ ನವಿಲು ಗರಿಯನ್ನು ಮನೆಗೆ ತನ್ನಿ. ಅದನ್ನು ದೇವರ ಮನೆಯಲ್ಲಿಡಿ. ದೇವರ ಮನೆಯಲ್ಲಿ ಪೂಜೆ ವೇಳೆ ಗಣೇಶ, ಈಶ್ವರ, ಲಕ್ಷ್ಮಿ, ಸರಸ್ವತಿ ಮತ್ತು ಹನುಮಂತನ ಮೂರ್ತಿ ಅಥವಾ ಫೋಟೋ ಇರಲಿ.

ಎಲ್ಲ ದೇವರ ಫೋಟೋಗಳಿಗೆ ಕುಂಕುಮ ಮತ್ತು ಅಕ್ಷತೆಯನ್ನು ಹಾಕಿ. ನವಿಲು ಗರಿಗೂ ಅಕ್ಷತೆ, ಕುಂಕುಮ ಹಾಕಿ. 7 ಅಗರಬತ್ತಿಯನ್ನು ಹಚ್ಚಿ. ಮೂರು ದೀಪವನ್ನು ಬೆಳಗಿ. ಎರಡು ತುಪ್ಪದ ದೀಪ ಹಾಗೂ ಒಂದು ಎಣ್ಣೆ ದೀಪವನ್ನು ಹಚ್ಚಿ.

ನಂತ್ರ ಒಂದು ಫೋಟೋ ಫ್ರೇಮ್ ತೆಗೆದುಕೊಳ್ಳಿ. ನೆನಪಿರಲಿ, ಫ್ರೇಮ್ ಕಪ್ಪು ಅಥವಾ ಬಿಳಿಯ ಬಣ್ಣದಲ್ಲಿರಬಾರದು. ಅಂತಹ ಫೋಟೋ ಫ್ರೇಮ್ ಒಳಗೆ ಪೂಜೆ ಮಾಡಿದ ನವಿಲು ಗರಿಯನ್ನು ಹಾಕಿ. ನಂತ್ರ ಮನೆಯ ಮುಖ್ಯ ಸ್ಥಳಗಳಲ್ಲಿ ಅದನ್ನು ಇಡಿ.

ಲೀವಿಂಗ್ ರೂಮಿನಲ್ಲಿ ನವಿಲು ಗರಿ ಫೋಟೋ ಫ್ರೇಮ್ ಇಟ್ಟರೆ ಸುಖ, ಶಾಂತಿ ಯಾವಾಗಲೂ ನೆಲೆಸಿರುತ್ತದೆ.

ಬೆಡ್ ರೂಮಿನಲ್ಲಿ ನವಿಲು ಗರಿ ಫೋಟೋ ಫ್ರೇಮ್ ಇಟ್ಟರೆ ಪತಿ-ಪತ್ನಿ ಮಧ್ಯೆ ಸದಾ ಪ್ರೀತಿ ನೆಲೆಸಿರುತ್ತದೆ.

ಕಪಾಟಿನ ಮೇಲೆ ನವಿಲು ಗರಿ ಫೋಟೋ ಫ್ರೇಮ್ ಇಟ್ಟರೆ ಆರ್ಥಿಕ ವೃದ್ಧಿಯಾಗಲಿದೆ. ಧನ ಲಾಭವಾಗಲಿದೆ.

ಅಡುಗೆ ಮನೆಯಲ್ಲಿ ಫೋಟೋ ಫ್ರೇಮ್ ಇಟ್ಟರೆ ಅನ್ನಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ.

ಮನೆಯ ಮುಖ್ಯ ದ್ವಾರದ ಬಳಿಯಿಟ್ಟರೆ ಮನೆಯನ್ನು ಲಕ್ಷ್ಮಿ ಬೇಗ ಪ್ರವೇಶ ಮಾಡುತ್ತಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read