HomeLatest Newsದೇಹ ತಂಪಾಗಿಸಲು ಸೇವಿಸಿ ʼಸಬ್ಬಕ್ಕಿ - ಶಾವಿಗೆʼಪಾಯಸ

ದೇಹ ತಂಪಾಗಿಸಲು ಸೇವಿಸಿ ʼಸಬ್ಬಕ್ಕಿ – ಶಾವಿಗೆʼಪಾಯಸ

ಸಬ್ಬಕ್ಕಿ ಶಾವಿಗೆ ಪಾಯಸ ದೇಹಕ್ಕೆ ಬಹಳ ತಂಪು. ಏಕೆಂದರೆ ದೇಹವನ್ನು ತಂಪಾಗಿರಿಸುವ ಗುಣ ಸಬ್ಬಕ್ಕಿಯಲ್ಲಿದೆ. ಹಾಗಾಗಿ ಬೇಸಿಗೆಯಲ್ಲಿ ಈ ಪಾಯಸ ಮಾಡಿ ತಿಂದರೆ ಒಳ್ಳೆಯದು.

ಬೇಕಾಗುವ ಸಾಮಾಗ್ರಿಗಳು:
ಸಬ್ಬಕ್ಕಿ – ಅರ್ಧ ಕಪ್ ನೆನೆಸಿದ್ದು (ಎರಡು ಗಂಟೆ ನೆನೆಸಿದ ಮೇಲೆ ಒಂದು ಕಪ್ ಆಗುತ್ತೆ)
ಶಾವಿಗೆ – 1 ಕಪ್
ಸಕ್ಕರೆ – 1 ಕಪ್
ಏಲಕ್ಕಿ ಪುಡಿ
ಹಾಲು – ಒಂದು ಲೀಟರ್
ಗೋಡಂಬಿ ದ್ರಾಕ್ಷಿ ಹೆಚ್ಚಿದ್ದು
ಬಾದಾಮಿ ಪಿಸ್ತಾ ಪುಡಿ
ತುಪ್ಪ ಎರಡು ಸ್ಪೂನ್.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ:

ಪ್ಯಾನ್ ಗೆ ಒಂದು ಸ್ಪೂನ್ ತುಪ್ಪ ಹಾಕಿ ಗೋಡಂಬಿಯನ್ನು ಕೆಂಪಗೆ ಆಗುವವರೆಗೆ ಹುರಿದುಕೊಳ್ಳಬೇಕು. ನಂತರ ದ್ರಾಕ್ಷಿಯನ್ನು ಸಣ್ಣ ಉರಿಯಲ್ಲಿ ದಪ್ಪ ಆಗುವವರೆಗೆ ಹುರಿದು ಕೊಳ್ಳಬೇಕು.

ನಂತರ ಶಾವಿಗೆಯನ್ನು ಹಾಕಿ ಕೆಂಪಗೆ ಆಗುವವರೆಗೆ ಹುರಿದು ಕೊಳ್ಳಬೇಕು. ಅದರ ಮೇಲೆ ಸಬ್ಬಕ್ಕಿ ಹಾಕಿ ಕಲಸಿ. ಸಬ್ಬಕ್ಕಿಯನ್ನು ಹುರಿದುಕೊಳ್ಳುವ ಅಗತ್ಯವಿಲ್ಲ. ನಂತರ ಹಾಲನ್ನು ಹಾಕಿ ಸಣ್ಣ ಉರಿಯಲ್ಲಿ ಬೇಯಲು ಬಿಡಬೇಕು. ಬೆಂದ ನಂತರ ಸಕ್ಕರೆ ಹಾಕಿಕೊಳ್ಳಬೇಕು. ನಂತರ ಹುರಿದ ಗೋಡಂಬಿ, ಹುರಿದ ದ್ರಾಕ್ಷಿ, ಬಾದಾಮಿ, ಪಿಸ್ತಾ, ಏಲಕ್ಕಿ ಪುಡಿಯನ್ನು ಮಿಕ್ಸ್ ಮಾಡಬೇಕು. ಪಾಯಸ ಗಟ್ಟಿ ಎನಿಸಿದರೆ ಹಾಲನ್ನು ಹಾಕಿ ಮತ್ತೆ ಕೆದಕಬಹುದು. ಈಗ ಪಾಯಸ ಸವಿಯಲು ಸಿದ್ಧ.

For Latest News Updates, Join Our Whatsapp Community🚩
RELATED ARTICLES

Most Popular