ದೆಹಲಿ ಹಾರರ್ ನ ಮತ್ತೊಂದು ಶಾಕಿಂಗ್‌ ವಿಡಿಯೋ; ಯುವತಿಯನ್ನ 12 ಕಿ.ಮೀ. ಎಳೆದೊಯ್ದ ಬಳಿಕ ಕಾರ್ ಪಾರ್ಕ್ ಮಾಡಿ ಆಟೋದಲ್ಲಿ ಆರೋಪಿಗಳು ಪರಾರಿ

ದೆಹಲಿಯಲ್ಲಿ ಹೊಸ ವರ್ಷಾಚರಣೆ ದಿನ ಯುವತಿಯನ್ನ 12 ಕಿ.ಮೀ. ಕಾರ್ ನಲ್ಲಿ ಎಳೆದೊಯ್ದಿದ್ದ ಐವರು ಯುವಕರಿಗೆ ಕಾರ್ ನಡಿ ಯವತಿ ಸಿಕ್ಕಿಹಾಕಿಕೊಂಡಿದ್ದಳು ಎಂಬುದು ಮೊದಲೇ ತಿಳಿದಿತ್ತು ಎಂಬುದನ್ನ ಪುಷ್ಟೀಕರಿಸುವಂತೆ ಮತ್ತೊಂದು ತಾಜಾ ಸಿಸಿ ಕ್ಯಾಮೆರಾ ದೃಶ್ಯ ಸಿಕ್ಕಿದೆ.

ಅಪಘಾತದ ನಂತರ ಅವರು ತಮ್ಮ ವಾಹನವನ್ನು ಪಾರ್ಕಿಂಗ್ ಸ್ಥಳದಲ್ಲಿ ಬಿಟ್ಟು ಆಟೋದಲ್ಲಿ ಪರಾರಿಯಾಗುವುದನ್ನು ಸಿಸಿ ಕ್ಯಾಮೆರಾದಲ್ಲಿ ಕಾಣಬಹುದು.

ಆರೋಪಿಗಳಲ್ಲಿ ಒಬ್ಬರು ವಾಹನದಿಂದ ಇಳಿದು ಎಡಭಾಗದಲ್ಲಿರುವ ಕಾರಿನ ಕೆಳಗೆ ಪರಿಶೀಲಿಸಲು ಇಣುಕಿ ನೋಡಿದ್ದನ್ನ ಕಾಣಬಹುದು. ಅಂಜಲಿಯ ದೇಹವು ಕಾರಿನ ಎಡ ಮುಂಭಾಗದ ಚಕ್ರಕ್ಕೆ ಸಿಲುಕಿಕೊಂಡಿರುವುದನ್ನು ದೃಢಪಡಿಸಿದ ವಿಧಿವಿಜ್ಞಾನ ವರದಿಯೊಂದಿಗೆ ಇದು ಹೊಂದಿಕೆಯಾಗುತ್ತದೆ.

ಅಂಜಲಿ ಕಾರಿನಡಿ ಸಿಲುಕಿರುವುದು ಆರೋಪಿಗೆ ತಿಳಿದಿತ್ತು ಎಂಬುದಕ್ಕೆ ಇದು ನಿರಾಕರಿಸಲಾಗದ ಪುರಾವೆಯಾಗಿದೆ. ಕಾರಿನಡಿ ಅಂಜಲಿ ಸಿಕ್ಕಿಹಾಕಿಕೊಂಡಿದ್ದಾಳೆಂದು ಐವರು ಪುರುಷರಿಗೆ ತಿಳಿದಿದ್ದರೂ ಅವರು ಈಗ ಸಾಕ್ಷ್ಯವನ್ನು ಮರೆಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ದೆಹಲಿ ಪೊಲೀಸರು ಖಚಿತಪಡಿಸಿದ್ದಾರೆ.

ಬಂಧಿತ ಐವರು ಆರೋಪಿಗಳನ್ನು ದೀಪಕ್ ಖನ್ನಾ (26), ಅಮಿತ್ ಖನ್ನಾ (25), ಕ್ರಿಶನ್ (27), ಮಿಥುನ್ (26) ಮತ್ತು ಮನೋಜ್ ಮಿತ್ತಲ್ (27) ಎಂದು ಗುರುತಿಸಲಾಗಿದೆ.

ಅವರಲ್ಲಿ ಇಬ್ಬರು ಕಾರನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದರು ಮತ್ತು ಐವರೂ ನಂತರ ಆಟೋದಲ್ಲಿ ಪರಾರಿಯಾಗಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read