ದಾರಿಯಲ್ಲಿ ಸಿಕ್ಕ ಹಣವನ್ನು ಏನು ಮಾಡ್ಬೇಕು….?

ಹಿಂದೂ ಧರ್ಮದಲ್ಲಿ ಹಣವನ್ನು ಲಕ್ಷ್ಮಿ ದೇವಿಯೆಂದು ಪೂಜಿಸಲಾಗುತ್ತದೆ. ಹಣವನ್ನು ಕಾಲಿನಲ್ಲಿ ತುಳಿಯುವುದಾಗ್ಲಿ, ಕಾಲ ಕೆಳಗೆ ಇರುವುದಾಗ್ಲಿ ಮಾಡುವುದಿಲ್ಲ. ಹಾಗೆಯೇ ದಾರಿಯಲ್ಲಿ ಬಿದ್ದ ಹಣಕ್ಕೆ ಅಗೌರವ ತೋರಿಸಬಾರದು ಎನ್ನುತ್ತಾರೆ. ಅನೇಕ ಬಾರಿ ದಾರಿಯಲ್ಲಿ ನಾಣ್ಯ ಬಿದ್ದಿರುವುದನ್ನು ನೋಡ್ತೇವೆ. ಆದ್ರೆ ಎಲ್ಲರೂ ಈ ನಾಣ್ಯವನ್ನು ಎತ್ತಿಕೊಳ್ಳುವುದಿಲ್ಲ. ರಸ್ತೆಯಲ್ಲಿ ಹಣ ಬಿದ್ದಿರುವುದನ್ನು ನೋಡಿ ಹೀಗೆಯೇ ಬಿಟ್ಟು ಮುಂದೆ ಸಾಗಿದ್ರೆ ಅದು ತಾಯಿ ಲಕ್ಷ್ಮಿಗೆ ಮಾಡಿದ ಅಪಮಾನ ಎನ್ನಲಾಗುತ್ತದೆ. ದಾರಿಯಲ್ಲಿ ಹಣ ಸಿಕ್ಕರೆ ಅದಕ್ಕೂ ಶಾಸ್ತ್ರದಲ್ಲಿ ಬೇರೆ ಬೇರೆ ಅರ್ಥವಿದೆ.

ಮನೆಯಿಂದ ಹೊರಡುವಾಗ ಹಣ ಸಿಕ್ಕರೆ ಒಂದು ಅರ್ಥ, ಮನೆಗೆ ಬರುವಾಗ ಹಣ ಸಿಕ್ಕರೆ ಇನ್ನೊಂದು ಅರ್ಥವಿದೆ. ಮನೆಯಿಂದ ಹೊರಗೆ ಹೋಗುವಾಗ ಹಣ ಸಿಕ್ಕರೆ ಅದನ್ನು ಮನೆ ಅಥವಾ ಕೆಲಸದ ಸ್ಥಳದಲ್ಲಿ ಇಡಬೇಕು. ಅದನ್ನು ಎಂದಿಗೂ ಖರ್ಚು ಮಾಡಬಾರದು.

ಮನೆಗೆ ವಾಪಸ್ ಬರುವಾಗ ನಿಮಗೆ ಹಣ ಸಿಕ್ಕರೆ ಅದನ್ನೂ ಸುರಕ್ಷಿತವಾಗಿಡಬೇಕು. ಆದ್ರೆ ಈ ಹಣವನ್ನು ಉಳಿದ ಹಣದ ಜೊತೆ ಎಂದೂ ಸೇರಿಸಬಾರದು. ಈ ಹಣವನ್ನು ಡೈರಿ ಅಥವಾ ಲಕೋಟೆಯಲ್ಲಿ ಇಡಬೇಕು. ಗಳಿಸಿದ ಹಣದ ಜೊತೆ ಇದನ್ನು ಸೇರಿಸಿದ್ರೆ ಖರ್ಚು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read