ತುಟಿಗೆ ಗಾಯ ಮಾಡಿಕೊಂಡ ಸನ್ನಿ ಲಿಯೋನ್;‌ ವಿಡಿಯೋ ಮಾಡಿ ಮಾಹಿತಿ

ನಟಿ ಸನ್ನಿ ಲಿಯೋನ್ ಸದಾ ಸೋಷಿಯಲ್ ಮೀಡಿಯಾದಲ್ಲಿ ಬ್ಯುಸಿ ಇರುವ ತಾರೆ. ಸದ್ಯ ಈ ನಟಿ ನಟನೆ, ಸಾಮಾಜಿಕ ಕಾರ್ಯಗಳಿಗೆ ಸುದ್ದಿಯಾಗದೇ ಬೇರೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅದೇನಪ್ಪ ಅಂದರೆ ಈ ತಾರೆಯ ತುಟಿಗೆ ಗಾಯ ಆಗಿದೆ. ಈ ಕುರಿತಂತೆ ನಟಿ ವಿಡಿಯೋ ಮಾಡಿದ್ದು, ಈಗ ಈ ವಿಡಿಯೋ ವೈರಲ್ ಆಗಿದೆ.

ಹೌದು, ಈ ನಟಿ ತುಟಿಗೆ ಗಾಯ ಆಗೊದಕ್ಕೆ ಕಾರಣ ಮೊಬೈಲ್. ಮೊಬೈಲ್ ತುಟಿ ಮೇಲೆ ಬಿದ್ದು ಗಾಯ ಆಗಿದೆ. ತುಟಿ ಸ್ವಲ್ಪ ಊದಿಕೊಂಡಿದೆ. ಇದನ್ನು ವಿವರಿಸಿರುವ ಸನ್ನಿ ಲಿಯೋನ್, ಇಷ್ಟಾದರೂ ನನ್ನ ಗಂಡ ಏನೂ ವಿಚಾರಿಸಿಕೊಂಡಿಲ್ಲ ಎಂತಲೂ ಹೇಳಿದ್ದಾರೆ. ನನ್ನ ತುಟಿಗೆ ಗಾಯ ಆಗಿದ್ದರೂ ಡ್ಯಾನಿಯಲ್ ಹಾಗೆ ಮಲಗಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಈ ವಿಡಿಯೋಗೆ ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ. ಅನೇಕರು ಇಷ್ಟು ನೋವಾದರೂ ಮತ್ತೆ ತುಟಿ ಮೇಲೆಯೇ ಮೊಬೈಲ್ ಇಟ್ಟುಕೊಂಡಿದ್ದೀರ ಅಂತ ಕಮೆಂಟ್ ಮಾಡಿದ್ದಾರೆ. ಸದ್ಯ ಸನ್ನಿ ಹಲವು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ. ತನ್ನ ಕುಟುಂಬದ ಜೊತೆ ಖುಷಿಯಾಗಿ ಜೀವನ ಮಾಡುತ್ತಿರುವ ಈ ನಟಿ ಅನೇಕ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read