ತಿಳಿಯಿರಿ ದೊಡ್ಡ ಪತ್ರೆ ಸೊಪ್ಪಿನ ಉಪಯೋಗ

ಮಳೆಗಾಲ ಬಂದಾಯ್ತು. ಜೊತೆಗೆ ಶೀತ, ಕೆಮ್ಮು, ಜ್ವರದ ಸಮಸ್ಯೆಗಳು ಅಂಟಿಕೊಳ್ಳುತ್ತವೆ. ದೊಡ್ಡಪತ್ರೆ ಸೊಪ್ಪು ಸೇವಿಸಿದರೆ ಇದರಿಂದ ಪಾರಾಗಬಹುದು.

ಒಂದು ವಾರದ ಕಾಲ ದೊಡ್ಡಪತ್ರೆಯ ಎಲೆಗಳನ್ನು ಸೇವಿಸುತ್ತಾ ಬಂದರೆ ಕಾಮಾಲೆ ರೋಗ ನಿವಾರಣೆಯಾಗುತ್ತದೆ. ದೊಡ್ಡಪತ್ರೆಯ ಎಲೆಗಳನ್ನು ಉಪ್ಪು ಸಹಿತ ತಿಂದರೆ ಜೀರ್ಣಶಕ್ತಿ ಹೆಚ್ಚುತ್ತದೆ.

ದೊಡ್ಡಪತ್ರೆಯ ಚಟ್ನಿಯನ್ನು ಸೇವಿಸಿದರೆ ತಲೆ ಸುತ್ತು ಕಡಿಮೆಯಾಗುತ್ತದೆ. ದೊಡ್ಡಪತ್ರೆ ಎಲೆಗಳಿಗೆ ಕಾಳು ಮೆಣಸು, ಉಪ್ಪು ಹಾಕಿ ಚೆನ್ನಾಗಿ ಅರೆದು ರಸವನ್ನು ಕುಡಿದರೆ ಬಾಯಿಯಿಂದ ಬರುವ ದುರ್ವಾಸನೆ ಮತ್ತು ದುರ್ಗಂಧ ದೂರವಾಗಿ ಪಿತ್ತ ಶಮನವಾಗುತ್ತದೆ.

ಮಕ್ಕಳಲ್ಲಿ ಕಾಣಿಸುವ ಶೀತ, ಕೆಮ್ಮು ನೆಗಡಿ ಮತ್ತು ಉಬ್ಬಸಕ್ಕೆ ಇದು ದಿವ್ಯ ಔಷಧಿ. ಇದರ ಎಲೆಗಳನ್ನು ಬೆಂಕಿಯಲ್ಲಿ ಬಾಡಿಸಿ ರಸವನ್ನು ನೆತ್ತಿಗೆ ಹಿಂಡುವುದು ಉತ್ತಮ. ಇದರ ಹಸಿ ಎಲೆಯ ರಸವನ್ನು ತೆಗೆದು ಜೇನುತುಪ್ಪದೊಂದಿಗೆ ಬೆರೆಸಿ ಕೊಡುವುದರಿಂದ ಕಫವನ್ನು ತಡೆಗಟ್ಟಬಹುದು. ಇದರ ಎಲೆಗಳಿಂದ ಜಜ್ಜಿ ಮಾಡಿದ ಪೇಸ್ಟ್ ಅನ್ನು ದೇಹದ ಮೇಲೆ ಗಾಯ ಅಥವಾ ಚೇಳು ಕಚ್ಚಿದ ಜಾಗಕ್ಕೆ ಹಚ್ಚುವುದರಿಂದ ನೋವು ಗುಣಮುಖವಾಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read