ತಲೆ ಕೂದಲು ಉದುರಿ ಬೋಳಾಗಲು ಇದೂ ಕಾರಣವಿರಬಹುದು….!

ವಯಸ್ಸು 40 ದಾಟಿದ ಬಳಿಕ ಕೂದಲು ಉದುರಿ ಬೋಳಾಗುವುದು  ಸಹಜ. ಅದೇ ಬಾಲ್ಡಿ 20ರ ಹರೆಯದಲ್ಲೇ ಕಾಣಿಸಿಕೊಂಡರೆ ಹುಡುಗರ ಸ್ಥಿತಿ ಹೇಗಾಗಬೇಡ. ಕೂದಲಿನ ಆರೈಕೆ ಸರಿಯಾಗಿ ಮಾಡುವುದರ ಮೂಲಕ ನೀವು ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.

ತಲೆಗೆ ಹೆಚ್ಚು ಬಿಸಿ ನೀರು ಸ್ನಾನ ಮಾಡಬೇಡಿ. ಹಾಗೆ ಪೂರ್ತಿ ತಣ್ಣಗಿನ ನೀರಿನ ಸ್ನಾನವೂ ಬೇಡ. ಅದು ಚಳಿಗಾಲವಿರಲಿ, ಬೇಸಿಗೆಯಿರಲಿ. ಹದವಾದ ಉಗುರು ಬೆಚ್ಚಗಿನ ನೀರಿನಲ್ಲೇ ಸ್ನಾನ ಮಾಡಿ.

ಸ್ನಾನ ಮಾಡಿ ಬಂದ ಬಳಿಕ ಹೆಚ್ಚು ಹೊತ್ತು ತಲೆಯನ್ನು ಬಟ್ಟೆಯಲ್ಲಿ ತಿಕ್ಕಿಕೊಳ್ಳಬೇಡಿ. ಒಮ್ಮೆ ಬಟ್ಟೆಯಿಂದ ಉಜ್ಜಿಕೊಂಡ ಬಳಿಕ ಗಾಳಿಯಲ್ಲಿ ಕೊಡವಿ ಒಣಗಿಸಿ. ಕೂದಲಿಗೆ ಹಾನಿಯಾಗಲು ಬಿಡದಿರಿ.

ಮಲಗುವ ಮುನ್ನ ತಲೆಗೆ ಸ್ನಾನ ಮಾಡುವುದು ಬಹಳ ಒಳ್ಳೆಯದು. ಇದರಿಂದ ಬೆವರು ದೂರವಾಗಿ ಕೂದಲು ಸ್ವಚ್ಛವಾಗುತ್ತದೆ. ಬೈಕ್ ನಲ್ಲಿ ಓಡಾಡುವಾಗ ಹೆಲ್ಮೆಟ್ ಧರಿಸುವ ಮುನ್ನ ಕೂದಲಿಗೆ ಬಟ್ಟೆ ಕಟ್ಟಿ.

ತಲೆಗೆ ಸ್ನಾನ ಮಾಡಿ ತಲೆ ಒಣಗಿದ ಬಳಿಕ ತುಸು ತೆಂಗಿನೆಣ್ಣೆ ತೆಗೆದುಕೊಂಡು ಹಚ್ಚಲು ಮರೆಯದಿರಿ. ಇದರಿಂದ ಕೂದಲಿನಲ್ಲಿ ಮಾಯಿಸ್ಚರೈಸರ್ ಉಳಿಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read