HomeAstro'ತಂದೆ - ತಾಯಿ' ಕನಸಿನಲ್ಲಿ ಕಾಣೋದೇಕೆ ಗೊತ್ತಾ....?

‘ತಂದೆ – ತಾಯಿ’ ಕನಸಿನಲ್ಲಿ ಕಾಣೋದೇಕೆ ಗೊತ್ತಾ….?

ಕನಸು ಬಿಳೋದು ಸಾಮಾನ್ಯ ಸಂಗತಿ. ಆದ್ರೆ ಕನಸು ಮುಂದಾಗುವ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುತ್ತದೆ ಎಂದು ನಂಬಲಾಗಿದೆ. ಕನಸಿನಲ್ಲಿ ವಸ್ತುಗಳ ಜೊತೆ ಆಪ್ತರು ಕಾಣಿಸಿಕೊಳ್ತಾರೆ. ಪತಿ, ತಂದೆ, ತಾಯಿ, ಸಂಬಂಧಿಕರು ಕನಸಿನಲ್ಲಿ ಕಾಣಿಸಿಕೊಂಡ್ರೆ ಯಾವ ಅರ್ಥ ಎಂಬುದನ್ನು ನಾವು ಹೇಳ್ತೇವೆ ಕೇಳಿ.

ಪತಿ: ಸ್ವಪ್ನದಲ್ಲಿ ಪತಿ ಕಂಡ್ರೆ ಇದು ಶುಭ ಸಂಕೇತ. ಮಹಿಳೆಯ ಜೀವನದಲ್ಲಿ ಹೊಸ ಬೆಳಕು ಮೂಡಲಿದೆ ಎಂದರ್ಥ. ಶೀಘ್ರವೇ ಮಹಿಳೆ ಬಾಳಲ್ಲಿ ಸಂತೋಷಕರ ಘಟನೆ ನಡೆಯಲಿದೆ ಎಂದರ್ಥ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಾಯಿ: ಕನಸಿನಲ್ಲಿ ತಾಯಿ ಕಂಡ್ರೆ ಅಥವಾ ಆಕೆಯನ್ನು ಅಪ್ಪಿಕೊಂಡಂತೆ ಕಂಡ್ರೆ ಸೌಭಾಗ್ಯ ಪ್ರಾಪ್ತಿಯಾಗಲಿದೆ ಎಂಬುದರ ಸಂಕೇತ. ದೊಡ್ಡ ಲಾಭವಾಗಲಿದ್ದು, ಶುಭ ಸುದ್ದಿ ಕೇಳಲಿದ್ದೀರಿ ಎಂದರ್ಥ.

ತಂದೆ: ಮಹಿಳೆಯ ಸ್ವಪ್ನದಲ್ಲಿ ತಂದೆ ಕಾಣಿಸಿಕೊಂಡ್ರೆ ಸುರಕ್ಷತೆಯ ಭರವಸೆ ನೀಡಿದಂತೆ. ಇಂಥ ಮಹಿಳೆ ತನ್ನ ಸುರಕ್ಷತೆ ಹಾಗೂ ಕಾಳಜಿ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಆಕೆಯನ್ನು ನೋಡಿಕೊಳ್ಳಲು ತಂದೆಯಿದ್ದಾನೆ ಎಂದರ್ಥ.

ಸ್ನೇಹಿತ: ಬಾಲ್ಯದ ಸ್ನೇಹಿತರು ಅಥವಾ ನಿಮ್ಮ ಜೊತೆ ಸದಾ ಕಾಲವಿರುವ ಸ್ನೇಹಿತರು ಕನಸಿನಲ್ಲಿ ಕಂಡ್ರೆ ಸುಖ-ಶಾಂತಿ ಜೀವನ ನಿಮ್ಮದಾಗಲಿದೆ ಎಂದರ್ಥ.

ಮಾವ: ಕನಸಿನಲ್ಲಿ ನಿಮ್ಮ ಮಾವ ಕಂಡ್ರೆ ಮುಂದಿನ ದಿನಗಳಲ್ಲಿ ಅಶುಭ ಘಟನೆ ನಡೆಯಲಿದೆ ಎಂದರ್ಥ.

For Latest News Updates, Join Our Whatsapp Community🚩
RELATED ARTICLES

Most Popular