HomeKarnatakaತಂದೆಗೆ ಊಟ ಕೊಡಲು ಜಮೀನಿಗೆ ಹೋಗುತ್ತಿದ್ದ ಬಾಲಕ ಹಾವು ಕಚ್ಚಿ ಸಾವು

ತಂದೆಗೆ ಊಟ ಕೊಡಲು ಜಮೀನಿಗೆ ಹೋಗುತ್ತಿದ್ದ ಬಾಲಕ ಹಾವು ಕಚ್ಚಿ ಸಾವು

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಂದೆಗೆ ರಾತ್ರಿ ವೇಳೆ ಊಟ ಕೊಡಲು ಹೋಗುತ್ತಿದ್ದ ಬಾಲಕ ಹಾವು ಕಚ್ಚಿದ ಪರಿಣಾಮ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

15 ವರ್ಷದ ಆಂಜನೇಯ ಸಾವನ್ನಪ್ಪಿದ ಬಾಲಕನಾಗಿದ್ದು, ದೇವದುರ್ಗ ತಾಲೂಕಿನ ಕ್ಯಾದಿಗೆರಾದ ಈತ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾವು ಕಡಿದ ಕೂಡಲೇ ಬಾಲಕನನ್ನು ಸಿರಿವಾರ ಪ್ರಾಥಮಿಕ ಆರೋಗ್ಯಕ್ಕೆ ಕರೆದು ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular