‘ಟಗರು ಪಲ್ಯ’ ಚಿತ್ರದ ಹೊಸ ಪೋಸ್ಟರ್ ರಿಲೀಸ್

ಶೂಟಿಂಗ್ ಮುಗಿದಿದೆ, ಸದ್ಯದಲ್ಲೇ ನಿಮ್ಮ ಮುಂದೆ ಬರ್ತೀವಿ'; 'ಟಗರು ಪಲ್ಯ' ಚಿತ್ರದ ಬಗ್ಗೆ ಅಪ್​ಡೇಟ್ ನೀಡಿದ ಧನಂಜಯ್ - Kannada News | Daali Dhananjay Production Venture Tagaru Palya Movie ...

ಇತ್ತೀಚೆಗೆ ಹೊಸ ಪ್ರತಿಭೆಗಳ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗುತ್ತಿವೆ. ಇದೀಗ ನಾಗಭೂಷಣ್ ಹಾಗೂ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತ ಅಭಿನಯಿಸಿರುವ ‘ಟಗರು ಪಲ್ಯ’ ನವೆಂಬರ್ ತಿಂಗಳಲ್ಲಿ ತೆರೆ ಮೇಲೆ ಬರಲಿದ್ದು, ಸಿನಿ ರಸಿಕರು ಕಾತುರದಿಂದ ಕಾಯುತ್ತಿದ್ದಾರೆ.

ಟಗರು ಪಲ್ಯ ಚಿತ್ರತಂಡ ಇಂದು ಹೊಸ ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ‘ರಾಜ್ಯೋತ್ಸವ ನಗೆಯ ವೀಳ್ಯ ತರ್ತಾ ಇದೀವಿ ಟಗರು ಪಲ್ಯ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಆಗಸ್ಟ್ 7 ರಂದು ಈ ಪೋಸ್ಟರನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿತ್ತು. ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ನಿಧನರಾದ ಕಾರಣ ಮುಂದೂಡಲಾಯಿತು. ‌

ಉಮೇಶ್ ಕೃಪಾ ಆಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಡಾಲಿ ಧನಂಜಯ್ ತಮ್ಮ ಡಾಲಿ ಪಿಚ್ಚರ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು,  ತಾರಾ, ರಂಗಾಯಣ ರಘು, ಹುಲಿ ಕಾರ್ತಿ,ಶರತ್ ಲೋಹಿತಾಶ್ವ ಸೇರಿದಂತೆ ಹಲವಾರು ಕಲಾವಿದರು ಬಣ್ಣ ಹಚ್ಚಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read