ಜೆಡಿಎಸ್‌ ಗೆ ಮತ್ತೊಂದು ಶಾಕ್: ನಗರಸಭೆ ಅಧ್ಯಕ್ಷೆ ಸೇರಿದಂತೆ 11 ಸದಸ್ಯರು ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು: ಈ‌ ಬಾರಿ ವಿಧಾನಸಭಾ ಚುನಾವಣೆ ಗೆಲ್ಲಲು ದಳಪತಿಗಳು ಪಂಚರತ್ನ ರಥಯಾತ್ರೆ ಮೂಲಕ ರಾಜ್ಯಾಧ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಜೆಡಿಎಸ್ ಗೆ ಸದಸ್ಯರು ಶಾಕ್ ನೀಡುತ್ತಿದ್ದಾರೆ. ನೆಲಮಂಗಲ ನಗರಸಭೆಯ ಜೆಡಿಎಸ್ ನ ಸದಸ್ಯರೆಲ್ಲರೂ ಪಕ್ಷ ತೊರೆದು ಸಾಮೂಹಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು, ನೆಲಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎನ್. ಶ್ರೀನಿವಾಸ್ ಇವರ ನೇತೃತ್ವದಲ್ಲಿ ನೆಲಮಂಗಲ ನಗರಸಭೆಯ ಜೆಡಿಎಸ್ ಹಾಲಿ ಅಧ್ಯಕ್ಷೆ ಲತಾ ಹೇಮಂತಕುಮಾರ್ ಹಾಗೂ 10 ಜನ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ನೆಲಮಂಗಲ ನಗರಸಭೆಯಲ್ಲಿ ಒಟ್ಟು 14 ಜನ ಜೆಡಿಎಸ್ ಸದಸ್ಯರಿದ್ದು ಅವರಲ್ಲಿ ಇದೀಗ ಅಧ್ಯಕ್ಷರು ಸೇರಿದಂತೆ 11 ಜನ ಸಾಮೂಹಿಕವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read