ಜೂನ್ 23ಕ್ಕೆ ‘ಅಗ್ರಸೇನಾ’ ರಿಲೀಸ್

ಮುರುಗೇಶ್ ಕಣ್ಣಪ್ಪ ನಿರ್ದೇಶನದ ಅಮರ್ ವಿರಾಜ್ ನಟನೆಯ ‘ಅಗ್ರಸೇನಾ’ ಚಿತ್ರ ಜೂನ್ 23ರಂದು ರಾಜ್ಯದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದೆ ನಟಿ ರಾಗಿಣಿ ದ್ವಿವೇದಿ ಈಗಾಗಲೇ ಈ ಸಿನಿಮಾ ಪ್ರಮೋಶನ್ ಗಾಗಿ ಪಾಲ್ಗೊಂಡಿದ್ದಾರೆ.

ಅಮರ್ ವಿರಾಜ್ ಗೆ ಜೋಡಿಯಾಗಿ ಗೌರಿಪುರದ ಗಯ್ಯಾಳಿಗಳು ಧಾರಾವಾಹಿ ಖ್ಯಾತಿಯ ರಚನಾ ದಶರತ್ ಅಭಿನಯಿಸಿದ್ದು ಅಗಸ್ತ್ಯ ಎನ್ನುವವರು ಕೂಡ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂ ಎಸ್ ತ್ಯಾಗರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ

ಇತ್ತೀಚಿಗಷ್ಟೇ ಈ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿತ್ತು ಡಾಲಿ ಧನಂಜಯ್ ಟ್ರೈಲರ್ ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಈ ಚಿತ್ರವನ್ನು ಶ್ರೀಮತಿ ಮಮತಾ ಜಯರಾಮ್ ರೆಡ್ಡಿ ನಿರ್ಮಾಣ ಮಾಡಿದ್ದು, ಇದೊಂದು ಆಕ್ಷನ್ ಥ್ರಿಲ್ಲರ್ ಲವ್ ಸ್ಟೋರಿ ಕಥಾಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read