
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಜೂನ್ 1ರಿಂದ ಯಾಕೆ ಪ್ರತಿಭಟನೆ. ಪ್ರತಾಪ್ ಸಿಂಹ ನಾಳೆಯಿಂದಲೇ ಪ್ರತಿಭಟನೆ ಶುರು ಮಾಡಿಕೊಳ್ಳಲಿ. ನಮ್ಮ ಮನೆ ಮುಂದೆ ಬಂದು ಮಲಗಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ.
ಇತ್ತೀಚೆಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಪ್ರತಾಪ್ ಸಿಂಹ, 200 ಯೂನಿಟ್ ಉಚಿತ ವಿದ್ಯುತ್ ನೀಡುವುದನ್ನು ತಕ್ಷಣ ಜಾರಿಗೊಳಿಸಬೇಕು. ಜೂನ್ ನಿಂದ ಬಳಕೆದಾರರು 200 ಯೂನಿಟ್ ವರೆಗೆ ಬಿಲ್ ಕಟ್ಟಬಾರದು ಎಂದಿದ್ದರಲ್ಲದೆ ಯೋಜನೆ ಕೂಡಲೇ ಜಾರಿಯಾಗದಿದ್ದಲ್ಲಿ ಜೂನ್ 1ರಿಂದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು.

