ಜಗಳ ಆದ್ರೆ ತವರಿಗೆ ಹೋಗೋಕೆ ಈಸಿ ಆಯಿತು’ : ಉಚಿತ ಬಸ್ ಪ್ರಯಾಣಕ್ಕೆ ಮಹಿಳೆಯರು ಫುಲ್ ಖುಷ್

ಬೆಂಗಳೂರು : ಎಲ್ಲಾ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಜೂನ್ 11 ರಿಂದ ಬಸ್ ಗಳಲ್ಲಿ ಉಚಿತ ಪ್ರಯಾಣ free bus service ನೀಡುವುದಾಗಿ ಸಿಎಂ ಸಿದ್ದರಾಮಯ್ಯ Siddaramaiah ಘೋಷಣೆ ಮಾಡಿದ್ದಾರೆ.

ರಾಜ್ಯ ಸರ್ಕಾರದ ಘೋಷಣೆಗೆ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಹಿಳೆಯರು ತರಹೇವಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಜಗಳ ಕೆಲವರು ಜಗಳ ಆದ್ರೆ ತವರಿಗೆ ಹೋಗೋಕೆ ಈಸಿ ಆಯಿತು’ , ಇದರಿಂದ ನಮಗೆ ಬಹಳ ಸಂತಸವಾಯಿತು ಎಂದು ಹೇಳಿದ್ದಾರೆ. ಉಚಿತ ಬಸ್ ಪ್ರಯಾಣದಿಂದ ಮಹಿಳೆಯರ ಖರ್ಚು ಕಡಿಮೆಯಾಗುತ್ತದೆ ಎಂದು ಕೆಲವು ಮಹಿಳೆಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೆಲವರು ಸರ್ಕಾರಿ ಬಸ್ಗಳಲ್ಲಷ್ಟೇ ಯಾಕೆ ಉಚಿತ ಪ್ರಯಾಣ? ಖಾಸಗಿ ಬಸ್ಗಳಲ್ಲೂ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಿ ಎಂದು ಮಹಿಳೆಯರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಘೋಷಣೆ ಜಾರಿಗೂ ಮುನ್ನ ಈಗಾಗಲೇ ಬಸ್ನಲ್ಲಿ ಟಿಕೆಟ್ ಪಡೆಯಲು ಮಹಿಳೆಯರು ನಿರಾಕರಿಸಿದ್ದು, ಫ್ರೀಯಾಗಿ ಓಡಾಡಲು ಬಿಡಿ ಎಂದು ಸಿಬ್ಬಂದಿ ಜೊತೆ ಗಲಾಟೆ ಮಾಡುತ್ತಿದ್ದಾರೆ. ಅದೇನೆ ಇರಲಿ ಸರ್ಕಾರ ಮನೆಯೊಡತಿಗೆ 2000 ಹಣ ಹಾಗೂ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿದ್ದು, ಮಹಿಳೆಯರು ಇದೇ ವಿಚಾರವಾಗಿ ಮನೆಯಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಎಲ್ಲಾ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಜೂನ್ 11 ರಿಂದ ಮಹಿಳೆಯರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ, ರಾಜ್ಯದ ಒಳಗಡೆ ಎಸಿ ಬಸ್ (AC bus) ಗಳನ್ನು ಬಿಟ್ಟು, ಎಲ್ಲಾ ಬಸ್ ಗಳಲ್ಲೂ ಉಚಿತ ಪ್ರಯಾಣ ಮಾಡಬಹುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read