ಚುನಾವಣೆಯಲ್ಲಿ ‘ಹುಲಿಯಾ’ ಕಾಡಿಗೆ ಹೋಗುತ್ತೆ; ‘ಬಂಡೆ’ ಒಡೆದು ಹೋಗುತ್ತದೆ; ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ನಳೀನ್ ಕುಮಾರ್ ಕಟೀಲ್ ವ್ಯಂಗ್ಯ

ಕೊಪ್ಪಳ: ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಈ ಬಾರಿ ವಿಧಾನಸಭಾ ಚುನವಣೆಯಲ್ಲಿ ಹುಲಿಯಾ ಕಾಡಿಗೆ ಹೋಗುತ್ತದೆ, ಬಂಡೆ ಒಡೆದು ಹೋಗುತ್ತದೆ ಎಂದು ಹೇಳಿದ್ದಾರೆ.

ಕೊಪ್ಪಳದಲ್ಲಿ ನಡೆದ ಜನ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಈ ಹಿಂದೆ ವಿದ್ಯುತ್ ಕಂಬ ನಿಲ್ಲಿಸಿದ್ರೂ ಕಾಂಗ್ರೆಸ್ ಗೆಲ್ಲುತ್ತಿತ್ತು. ಈಗ ಕ್ಷೇತ್ರ ಇಲ್ಲದೇ ರಾಹುಲ್ ಗಾಂಧಿ ಕೇರಳಕ್ಕೆ ಹೋಗಿದ್ದಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯಗೆ ಕ್ಷೇತ್ರವೇ ಇಲ್ಲ, ಆದರೂ ಸಿದ್ದರಾಮಯ್ಯ ಈಗಾಗಲೇ ಮುಖ್ಯಮಂತ್ರಿ ಶರ್ಟ್ ಹೊಲಿಸಿ ಇಟ್ಟಿದ್ದಾರೆ. ಆದರೆ ನನ್ನ ಅಪ್ಪನಾಣೆ ಸಿದ್ದರಾಮಯ್ಯ ಸಿಎಂ ಆಗಲ್ಲ ಎಂದರು.

ದೇವೇಗೌಡರ ಬಳಿ ಬೆಳೆದು ಅವರನ್ನೇ ತುಳಿದು ಬಂದವರು, ಬಳಿಕ ಸೋನಿಯಾ ಗಾಂಧಿ ಕಾಲು ಹಿಡಿದು ಮುಖ್ಯಮಂತ್ರಿಯಾದರು ನೀವು ನನ್ನನ್ನೇ ಜೋಕರ್ ಅಂತಿರಾ ? ನೀವು ಬ್ರೋಕರ್. ನೀವು ಬ್ರೋಕರ್ ಆಗಿಯೇ ಮುಖ್ಯಮಂತ್ರಿ ಆಗಿದ್ದು ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಡಿ.ಕೆ.ಶಿವಕುಮಾರ್ ಗೆ ಎರಡು ಕುಕ್ಕರ್ ಮೇಲೆ ಬಹಳ ಪ್ರೀತಿ. ಒಂದು ಮಂಗಳೂರು ಕುಕ್ಕರ್, ಇನ್ನೊಂದು ಬೆಳಗಾವಿ ಕುಕ್ಕರ್. ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟಿಸಿದವನನ್ನು ಅಮಾಯಕ ಅಂತಿದ್ದಾರೆ ಎಂದು ಗುಡುಗಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read