ಚುನಾವಣಾ ರಾಜಕೀಯದಿಂದ ಈಶ್ವರಪ್ಪ ನಿವೃತ್ತಿ ಘೋಷಣೆ ಬಳಿಕ ಶಿವಮೊಗ್ಗ ರಾಜಕೀಯ ಚಿತ್ರಣವೇ ಬದಲು; ಆಕಾಂಕ್ಷಿಗಳಲ್ಲಿ ಗರಿಗೆದರಿದ ನಿರೀಕ್ಷೆ

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದು, ಅವರ ಅಭಿಮಾನಿಗಳು ಹೇಳಿಕೆಯನ್ನು ಹಿಂಪಡೆದು ಚುನಾವಣೆಯಲ್ಲಿ ಸ್ಪರ್ಧಿಸಲು ಒತ್ತಡ ಹೇರುತ್ತಿರುವರಾದರೂ ಇದು ಸಾಧ್ಯವಾಗುವ ನಿರೀಕ್ಷೆಯಿಲ್ಲ. ಇದರ ಮಧ್ಯೆ ಈ ವಿದ್ಯಮಾನದಿಂದಾಗಿ ಶಿವಮೊಗ್ಗ ಕ್ಷೇತ್ರದ ಬೇರೆ ಪಕ್ಷದ ಟಿಕೆಟ್ ಆಕಾಂಕ್ಷಿಗಳಲ್ಲಿ ಗೆಲುವಿನ ಆಸೆ ಚಿಗುರೊಡೆದಿದೆ.

ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಕುರುಬ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈಶ್ವರಪ್ಪನವರನ್ನು ಬೆಂಬಲಿಸಿಕೊಂಡು ಬಂದಿದ್ದರು. ಹೀಗಾಗಿ ಇದೇ ಸಮುದಾಯದ ಅಭ್ಯರ್ಥಿಗಳು ಬೇರೆ ಪಕ್ಷಗಳಿಂದ ಕಣಕ್ಕಿಳಿದರೂ ಸಹ ಪ್ರಯೋಜನವಾಗುತ್ತಿರಲಿಲ್ಲ. ಇದೇ ಸಮುದಾಯಕ್ಕೆ ಸೇರಿದ್ದ ಎಂ. ಶ್ರೀಕಾಂತ್ ಈ ಮೊದಲು ಜೆಡಿಎಸ್ ನಿಂದ ಸ್ಪರ್ಧಿಸಿದ್ದರಾದರೂ ಅವರಿಗೆ ನಿರೀಕ್ಷಿತ ಬೆಂಬಲ ವ್ಯಕ್ತವಾಗಿರಲಿಲ್ಲ.

ಇದೀಗ ಚುನಾವಣಾ ರಾಜಕೀಯದಿಂದ ಕೆ.ಎಸ್. ಈಶ್ವರಪ್ಪ ಹಿಂದೆ ಸರಿದಿರುವುದರಿಂದ ಕುರುಬ ಸಮುದಾಯದ ಮತಗಳ ಜೊತೆಗೆ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಮತದಾರರು ಮೊದಲಾದವರು ಬೆಂಬಲಿಸಿದರೆ ತಮ್ಮ ಗೆಲುವು ಸುಲಭ ಎಂಬ ಲೆಕ್ಕಾಚಾರದಲ್ಲಿ ಎಂ. ಶ್ರೀಕಾಂತ್ ಇದ್ದಾರೆನ್ನಲಾಗಿದೆ. ಹೀಗಾಗಿ ಆರಂಭದಲ್ಲಿ ಕಣಕ್ಕಿಳಿಯಲು ಹಿಂದೇಟು ಹಾಕಿದ್ದ ಅವರು ಇದೀಗ ಸ್ಪರ್ಧೆಗೆ ಉತ್ಸಾಹ ತೋರುತ್ತಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೂ ಸಹ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಕಣದಿಂದ ಈಶ್ವರಪ್ಪ ಸ್ಪರ್ಧೆಗಿಳಿಯದಿರುವುದು ಗೆಲುವಿನ ಭರವಸೆ ಮೂಡುವಂತಾಗಿದೆ. ಬಿಜೆಪಿ ಟಿಕೆಟ್ ಈಶ್ವರಪ್ಪನವರ ಪುತ್ರ ಕಾಂತೇಶ್ ಸೇರಿದಂತೆ ಇತರರಿಗೆ ಸಿಕ್ಕರೂ ಸಹ ಹೊಸ ಮುಖವಾಗುವ ಕಾರಣ ಪ್ರಬಲ ಪೈಪೋಟಿ ನೀಡಬಹುದು ಎಂಬ ಲೆಕ್ಕಾಚಾರ ಇವರುಗಳಿಗಿದೆ. ಒಟ್ಟಿನಲ್ಲಿ ಚುನಾವಣಾ ರಾಜಕೀಯದಿಂದ ಈಶ್ವರಪ್ಪನವರು ನಿವೃತ್ತಿ ಘೋಷಿಸಿದ ಬಳಿಕ ಶಿವಮೊಗ್ಗ ಕ್ಷೇತ್ರದ ರಾಜಕೀಯ ಚಿತ್ರಣವೇ ಬದಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read