ಚಿಕ್ಕ ವಯಸ್ಸಿನಲ್ಲೇ ಕನಸಿನ‌ ಮನೆ ಕೊಂಡುಕೊಂಡ ನಟಿ..!

ಆಕೆಗೆ ಇನ್ನು ಕೇವಲ 15 ವರ್ಷ ಮಾತ್ರ. ಆದರೆ ಅವಳು ಮಾಡಿರುವ ಕೆಲಸ ಕೇಳಿದ್ರೆ ನೀವು ಒಮ್ಮೆ ಆಶ್ಚರ್ಯಚಕಿತರಾಗ್ತೀರ. ಕೌಶಿಕ್ ಕಿ ಪಾಂಚ್ ಬೆಹನ್, ಯೇ ಹೆ ಮೊಹಬ್ಬತೇನ್, ಕಾಮಿಡಿ ನೈಟ್ಸ್ ವಿತ್ ಕಪಿಲ್ ಸೇರಿದಂತೆ ಅನೇಕ ಟಿವಿ ಶೋಗಳಲ್ಲಿ ಮಿಂಚಿದ ನಟಿ ರುಹಾನಿಕ ಹೊಸ ವರ್ಷಕ್ಕೆ ಹೊಸ ಮನೆ ಕೊಂಡುಕೊಂಡಿದ್ದಾರೆ‌. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ಈ ನಟಿ.

ಹೌದು, ಚಿಕ್ಕ ವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟ ಈ‌ ನಟಿ ಟಿವಿ ಶೋ ಮೂಲಕ ಜನಮನ ಗೆಲ್ತಾ ಇದ್ದಾರೆ‌. ಹೊಸ ಆರಂಭಕ್ಕೆ ಹೊಸತನ‌ ಅನ್ನೋ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ ರುಹಾನಿಕ. ಹೊಸ ಮನೆ ಕುರಿತಂತೆ ಇಂಸ್ಟಾಗ್ರಾಂ ನಲ್ಲಿ ಬರೆದುಕೊಂಡಿರುವ ಇವರು, ಸ್ವಂತ ಮನೆ ಖರೀದಿ ಮಾಡಲಾಗಿದೆ. ಇದು ನನ್ನ ಕನಸಿನ ಮನೆ. ಈ ಕನಸನ್ನು ಸಾಧಿಸಲು ನನಗೆ ಸಹಾಯ ಮಾಡಿದ ಎಲ್ಲಾ ಪ್ಲಾಟ್‌ಫಾರ್ಮ್ ಮತ್ತು ನನ್ನ ಪೋಷಕರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದಿದ್ದಾರೆ‌.

ಇನ್ನು ಹೆತ್ತವರಿಗೂ ಧನ್ಯವಾದ ಹೇಳಿರುವ ಇವರು, ಅವರ ಸಹಾಯ ಮತ್ತು ಮಾರ್ಗದರ್ಶನದಿಂದ ಇದೆಲ್ಲ ಸಾಧ್ಯ ಎಂದಿದ್ದಾರೆ. ಹಾಗೂ ತನ್ನ ತಾಯಿಯ ಕುರಿತು ವಿಶೇಷವಾಗಿ ಬರೆದುಕೊಂಡಿದ್ದಾರೆ. ಎಲ್ಲಾ ರೀತಿಯಲ್ಲೂ ಪ್ರತಿ ಪೈಸೆಯನ್ನು ಉಳಿಸಿ ಅದನ್ನು ದ್ವಿಗುಣಗೊಳಿಸುವ ದೇಸಿ ತಾಯಿ ಎಂದು ಹೇಳಿದ್ದಾರೆ. ಇದು ಆರಂಭ ಮಾತ್ರ. ಇನ್ನಷ್ಟು ಕನಸುಗಳನ್ನು ನಾನು ಬೆನ್ನಟ್ಟುತ್ತೇನೆ ಎಂತಲೂ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read