ಚಳಿಗಾಲದಲ್ಲಿ ತೂಕ ಇಳಿಸಿಕೊಳ್ಳಲು ನಿಂಬೆ ಪಾನಕದ ಬದಲು ಈ ಪಾನೀಯಗಳನ್ನು ಸೇವಿಸಿ, ಫಿಟ್ ಆಗುತ್ತೆ ದೇಹ

ತೂಕವನ್ನು ಕಳೆದುಕೊಳ್ಳಲು ಹೆಚ್ಚಿನ ಜನರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ಪಾನಕವನ್ನು ಕುಡಿಯುತ್ತಾರೆ. ಆದರೆ ಚಳಿಗಾಲದಲ್ಲಿ ನಿಂಬೆ ಪಾನಕ ಕುಡಿಯುವುದರಿಂದ ನೆಗಡಿ ಮತ್ತು ಕೆಮ್ಮಿನಂತಹ ಸಮಸ್ಯೆಗಳು ಬರಬಹುದು. ಹಾಗಾಗಿ ನಿಂಬೆ ಪಾನಕದ ಬದಲು ತೂಕ ಇಳಿಸುವಂತಹ ಕೆಲವೊಂದು ಪರಿಣಾಮಕಾರಿ ಪಾನೀಯಗಳನ್ನು ಕುಡಿಯುವುದು ಸೂಕ್ತ.

ಓಮದ ಕಷಾಯ : ಚಳಿಗಾಲದಲ್ಲಿ ತೂಕ ಇಳಿಸಲು ಓಮದ ಕಷಾಯ ಸಹಕಾರಿಯಾಗಿದೆ. ಇದನ್ನು ತಯಾರಿಸುವುದು ಕೂಡ ಸುಲಭ. ಒಂದು ಚಮಚ ಓಮದ ಕಾಳನ್ನು ಒಂದು ಲೋಟ ನೀರಿನಲ್ಲಿ ಕುದಿಸಿ. ಬಿಸಿ ಬಿಸಿಯಾಗಿ ಕುಡಿಯಿರಿ. ಹೀಗೆ ಮಾಡುವುದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಕೂಡ ಸುಧಾರಿಸುತ್ತದೆ.

ಜೀರಿಗೆ ನೀರು: ಚಳಿಗಾಲದಲ್ಲಿ ಜೀರಿಗೆ ನೀರು ಕೂಡ ಉತ್ತಮ ಆಯ್ಕೆಯಾಗಿದೆ. ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ ಹಾಕಿ ಕುದಿಸಿ. ಈ ಕಷಾಯವನ್ನು ನಿಯಮಿತವಾಗಿ ಕುಡಿಯಿರಿ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆ  ಸುಧಾರಿಸುತ್ತದೆ ಮತ್ತು ಚೆನ್ನಾಗಿ ನಿದ್ರೆ ಬರುತ್ತದೆ.

ಮೆಂತ್ಯದ ನೀರು : ಮೆಂತ್ಯ ಕೂಡ ತೂಕ ಇಳಿಸಲು ಸಹಕಾರಿಯಾಗಿದೆ. ಈ ಪಾನೀಯ ಶೀತದಿಂದಲೂ ಪರಿಹಾರವನ್ನು ನೀಡುತ್ತದೆ. ಒಂದು ಚಮಚ ಮೆಂತ್ಯವನ್ನು ರಾತ್ರಿ ಒಂದು ಲೋಟ ನೀರಿನಲ್ಲಿ ನೆನೆಸಿ. ಬೆಳಗ್ಗೆ ಅದನ್ನು ಫಿಲ್ಟರ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರಿಂದ ತೂಕವನ್ನೂ ಕಡಿಮೆ ಮಾಡಬಹುದು ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಜೇನುತುಪ್ಪ ಮತ್ತು ನೀರು: ಬೆಚ್ಚಗಿನ ನೀರಿಗೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ನಿಯಮಿತವಾಗಿ ಈ ರೀತಿ ಮಾಡಿದರೆ ತೂಕವನ್ನು ಕಡಿಮೆ ಮಾಡಬಹುದು. ಈ ಪಾನೀಯವು ನಿಮ್ಮ ದೇಹವನ್ನು ನಿರ್ವಿಷಗೊಳಿಸಲು ಸಹಾಯಕವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read