ಚಂದ್ರ ದೋಷದಿಂದ ಕಾಡುವ ʼಖಿನ್ನತೆʼ ಸಮಸ್ಯೆ ನಿವಾರಣೆಗೆ ಈ ಉಪಾಯ ಅನುಸರಿಸಿ

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಮನಸ್ಸಿನ ಸಮತೋಲನ ಅತಿ ಮುಖ್ಯ. ಮನುಷ್ಯನ ಮನಸ್ಸು ಅಶಾಂತಿಯಿಂದ ಕೂಡಿದ್ದರೆ ಇದು ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮನಸ್ಸು ಸಮತೋಲನ ಕಳೆದುಕೊಂಡಲ್ಲಿ ಖಿನ್ನತೆ ಕಾಡಲು ಶುರುವಾಗುತ್ತದೆ.

ಮನಸ್ಸು ಸಮತೋಲನ ಕಳೆದುಕೊಳ್ಳಲು ಚಂದ್ರ ಹಾಗೂ ಬುಧ ಗ್ರಹ ಕಾರಣ. ಜಾತಕದಲ್ಲಿ ಚಂದ್ರನ ಸ್ಥಾನ ಸರಿಯಾಗಿಲ್ಲವಾದಲ್ಲಿ ಮನಸ್ಸು ಖಿನ್ನತೆಗೊಳಗಾಗುತ್ತದೆ. ಚಂದ್ರನನ್ನು ಮನಸ್ಸಿನ ಸ್ವಾಮಿ ಎಂದು ಜೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಖಿನ್ನತೆಗೆ ಬಹುಮುಖ್ಯ ಕಾರಣ ಚಂದ್ರ ಹಾಗೂ ಬುಧ.

ಚಂದ್ರ ಗ್ರಹ, ಶನಿ, ರಾಹು ಮತ್ತು ಸೂರ್ಯ ಗ್ರಹದ ಮೇಲೆ ಪ್ರಭಾವ ಬೀರುತ್ತದೆ. ಜಾತಕದಲ್ಲಿ ಬುಧ ಬಲಿಷ್ಠನಾಗಿದ್ದರೆ ಬೇರೆ ಗ್ರಹದೋಷ ಆತನನ್ನು ಏನು ಮಾಡಲೂ ಸಾಧ್ಯವಿಲ್ಲ. ಆದ್ರೆ ಬುಧ ದುರ್ಬಲನಾಗಿದ್ದು, ಚಂದ್ರನ ಮೇಲೆ ಶನಿ ಪ್ರಭಾವವಿದ್ದಲ್ಲಿ ವ್ಯಕ್ತಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಖಿನ್ನತೆ ತಡೆಗಟ್ಟಲು ಯೋಗ ಹಾಗೂ ಪ್ರಾಣಾಯಾಮವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇದ್ರ ಜೊತೆಗೆ ಪ್ರತಿದಿನ ಬೆಳಿಗ್ಗೆ ಸೂರ್ಯನಿಗೆ ಜಲವನ್ನು ಅರ್ಪಿಸಬೇಕು. ನಂತ್ರ ಸೂರ್ಯನ ಶಾಖಕ್ಕೆ ಮೈ ಒಡ್ಡಬೇಕು. ಇದ್ರಿಂದ ಸಾಕಷ್ಟು ಲಾಭವಿದೆ. ಖಿನ್ನತೆಗೊಳಗಾದ ಮಂದಿ ಕತ್ತಲಿನಿಂದ ಸದಾ ದೂರವಿರಬೇಕು.

ಖಿನ್ನತೆಗೆ ಒಳಗಾದವರು ಪ್ರತಿದಿನ ಬಾಳೆಹಣ್ಣನ್ನು ತಿನ್ನಬೇಕು. ಬೆಳಿಗ್ಗೆ ಹಾಗೂ ರಾತ್ರಿ 108 ಗಾಯತ್ರಿ ಮಂತ್ರವನ್ನು ಪಠಿಸಬೇಕು. ಎಂದೂ ಖಿನ್ನತೆಗೊಳಗಾದವರು ಮುತ್ತನ್ನು ಧರಿಸಬಾರದು. ಜೊತೆಗೆ ಹುಣ್ಣಿಮೆಯಂದು ಉಪವಾಸ ಮಾಡಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read