‘ಘೋಡೆ ಪೇ ಸವಾರ್’ ಹಾಡಿದ ಸೋಶಿಯಲ್ ಮೀಡಿಯಾ ಸ್ಟಾರ್ ನೀಮಾ ಪೌಲ್

‘ಕಲಾ’ ಹಿಂದಿ ಸಿನೆಮಾದ ಗಾಯಕಿ ಅನ್ವಿತಾ ದತ್ ಹಾಡಿರುವ ‘ಘೋಡೆ ಪೇ ಸವಾ‌ರ್ ಹೇ’ (ಕುದುರೆ ಏರಿ ಬಂದ ಪ್ರಿಯಕರ) ಇತ್ತೀಚೆಗೆ ಸಖತ್ ಟ್ರೆಂಡ್‌ನಲ್ಲಿರುವ ಹಾಡಾಗಿದೆ. ಈ ಹಾಡಿಗೆ ಅನೇಕರು ಈಗ ವಿಡಿಯೋ ಮಾಡಿ ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಪೋಸ್ಟ್ ಮಾಡ್ತಿದ್ದಾರೆ. ಈ ವಿಡಿಯೋಗಳು ಹೆಚ್ಚು ವ್ಯೂಸ್ ಹಾಗೂ ಹೆಚ್ಚು ಹೆಚ್ಚು ಲೈಕ್‌ಗಳನ್ನ ಪಡೆದಿವೆ.

ಈಗ ಇದೇ ಹಾಡನ್ನ ಸೋಶಿಯಲ್ ಮೀಡಿಯಾ ಸ್ಟಾರ್ ಕಿಲಿ ಪೌಲ್ ಸಹೋದರಿ ನೀಮಾ ಪೌಲ್ ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನೀಮಾ ಪೌಲ್‌ಗೆ ಹಿಂದಿ ಭಾಷೆ ಬರದಿದ್ದರೂ, ಈ ಹಾಡನ್ನ ಸುಶ್ರಾವ್ಯವಾಗಿ ಹಾಡುವುದನ್ನ ಇಲ್ಲಿ ನೋಡಬಹುದು. ಈ ವಿಡಿಯೋವನ್ನ ಕಿಲಿ ಪೌಲ್ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದಕ್ಕೆ ಕ್ಯಾಪ್ಷನ್‌ನಲ್ಲಿ ಪ್ರತಿಯೊಬ್ಬರು ಕೇಳಿ, ‘ಇದೇ ನೀಮಾ ಪೌಲ್ ನಿಜವಾದ ಧ್ವನಿ’ ಎಂದು ಬರೆದಿದ್ದಾರೆ.

ಇಲ್ಲಿಯ ತನಕ ನೀವು ಕಿಲಿಪೌಲ್ ಹಾಗೂ ನೀಮಾಪೌಲ್ ಇವರಿಬ್ಬರೂ, ಬಾಲಿವುಡ್ ಹಾಡಿಗೆ ಡಾನ್ಸ್ ಮಾಡೋದನ್ನ, ಲಿಪ್ ಸಿಂಕ್ ಮಾಡುವುದನ್ನ ನೋಡಿರ್ತಿರಾ? ಆದರೆ ಈ ಬಾರಿ ಆಕೆಯೇ ಸ್ವತಃ ಹಿಂದಿ ಹಾಡು ಹೇಳಿರುವುದು ವಿಶೇಷವಾಗಿದೆ.

ಕಲಾ ಸಿನೆಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಸ್ವಸ್ತಿಕಾ ಮುಖರ್ಜಿ ಈ ಹಾಡನ್ನ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ನೀಮಾ ಪೌಲ್ ಅವರ ಈ ಪ್ರಯತ್ನವನ್ನ ಶ್ಲಾಘಿಸಿದ್ದಾರೆ.

https://youtu.be/JNUiuE_Fukg

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read