 ರಾಮನಗರ: ಕೆಂಪುರಾಣಿ ಟೊಮೆಟೊ ಬೆಲೆ ಗಗನಕ್ಕೇರಿರುವ ನಡುವೆಯೇ ಹುಳಿರಾಜ ಹುಣಸೆ ಹಣ್ಣಿನ ಬೆಲೆಯೂ ಹೆಚ್ಚಳವಾಗಿದ್ದು, ಟೊಮೆಟೊಗೆ ಪರ್ಯಾಯ ಬಳಕೆಯಾಗಿ ಹಣಸೆ ಹಣ್ಣು ಬಳಸುತ್ತಿದ್ದ ಗ್ರಾಹಕರಿಗೆ ಸಂಕಷ್ಟ ಎದುರಾಗಿದೆ.
ರಾಮನಗರ: ಕೆಂಪುರಾಣಿ ಟೊಮೆಟೊ ಬೆಲೆ ಗಗನಕ್ಕೇರಿರುವ ನಡುವೆಯೇ ಹುಳಿರಾಜ ಹುಣಸೆ ಹಣ್ಣಿನ ಬೆಲೆಯೂ ಹೆಚ್ಚಳವಾಗಿದ್ದು, ಟೊಮೆಟೊಗೆ ಪರ್ಯಾಯ ಬಳಕೆಯಾಗಿ ಹಣಸೆ ಹಣ್ಣು ಬಳಸುತ್ತಿದ್ದ ಗ್ರಾಹಕರಿಗೆ ಸಂಕಷ್ಟ ಎದುರಾಗಿದೆ.
ಟೊಮೆಟೊ ಹಣ್ಣಿನ ದರ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ಟೊಮೆಟೊ ಹಣ್ಣು ಬಿಟ್ಟು ಪರ್ಯಾಯವಾಗಿ ಹುಣಸೆ ಹಣ್ಣಿನ ಮೊರೆ ಹೋಗುತ್ತಿದ್ದಾರೆ. ಇದೀಗ ಹುಣೆಸೆ ಹಣ್ಣಿಗೂ ಬೇಡಿಕೆ ಹೆಚ್ಚುತ್ತಿದ್ದಂತೆ ಹುಣಸೆ ಹಣ್ಣಿನ ಬೆಲೆಯಲ್ಲಿಯೂ ಏರಿಕೆಯಾಗಿದೆ.
ಮೂರು ದಿನಗಳ ಹಿಂದೆ ರಾಮನಗರದಲ್ಲಿ ಕೆ.ಜಿ. ಹುಣಸೆ ಹಣ್ಣು 100 ರೂ ಇತ್ತು. ಈಗ 200-220 ರೂ ಆಗಿದೆ. ಮಾರುಕಟ್ಟೆಯಲ್ಲಿ ಹಾಗೂ ಅಂಗಡಿಗಳಲ್ಲಿ ಉತ್ತಮ ಗುಣಮಟ್ಟದ ಹುಣಸೆ ಹಣ್ಣು 200 ರೂ ಗಡಿ ದಾಟಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.
ಗುಣಮಟ್ಟದ ಹುಣಸೆ ಹಣ್ಣು ಕೆ.ಜಿಗೆ 200-220 ರೂ ಆಗಿದೆ. ಮಧ್ಯಮ ಗುಣಮಟ್ಟದ ಹುಣಸೆ ಹಣ್ಣು 170-200 ರೂ ಇದೆ. ಮೂರನೆ ದರ್ಜೆ ಹುಣಸೆ ಹಣ್ಣು 150-160 ರೂ ಆಗಿದೆ.

		 Loading ...
 Loading ... 