HomeIndiaಗ್ಯಾರೇಜ್ ಗೆ ಭೇಟಿ ನೀಡಿ 'ಮೆಕ್ಯಾನಿಕ್' ಗಳ ಜೊತೆ ರಾಹುಲ್ ಮಾತುಕತೆ....!

ಗ್ಯಾರೇಜ್ ಗೆ ಭೇಟಿ ನೀಡಿ ‘ಮೆಕ್ಯಾನಿಕ್’ ಗಳ ಜೊತೆ ರಾಹುಲ್ ಮಾತುಕತೆ….!

ಕೆಲ ತಿಂಗಳುಗಳ ಹಿಂದಷ್ಟೇ ನವದೆಹಲಿಯಿಂದ ಚಂಡಿಗಢಕ್ಕೆ ತೆರಳುತ್ತಿದ್ದ ಟ್ರಕ್ ನಲ್ಲಿ ಪ್ರಯಾಣಿಸಿ ಚಾಲಕರುಗಳ ಸಮಸ್ಯೆ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದೀಗ ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕುವ ಮೂಲಕ ಗಮನ ಸೆಳೆದಿದ್ದಾರೆ.

ಹೌದು, ಮಂಗಳವಾರ ರಾತ್ರಿ ನವ ದೆಹಲಿಯ ಕರೋಲ್ ಬಾಗ್ ಮಾರುಕಟ್ಟೆ ಬಳಿ ಇರುವ ಆಟೋ ಗ್ಯಾರೇಜ್ ಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಮೆಕ್ಯಾನಿಕ್ ಗಳ ಜೊತೆ ಮಾತುಕತೆ ನಡೆಸುವ ಮೂಲಕ ಅವರ ಕುಂದು ಕೊರತೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಜೊತೆ ಮಾತುಕತೆ ನಡೆಸಿದ ರಾಹುಲ್ ಗಾಂಧಿ, ಜೊತೆಗೆ ರಿಪೇರಿ ಕಾರ್ಯದ ಕುರಿತು ಕುತೂಹಲದಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ ಸ್ವತಃ ತಾವೇ ಸ್ಕ್ರೂ ಡ್ರೈವರ್ ಹಿಡಿದು ವಾಹನವೊಂದರ ಸ್ಕ್ರೂ ಟೈಟ್ ಮಾಡಿದ್ದಾರೆ. ಇದರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular