ಗಾಂಜಾದಲ್ಲಿ ಅಡಗಿದೆ ಸಂಭೋಗಕ್ಕೆ ಸಂಬಂಧಪಟ್ಟ ರಹಸ್ಯ…..! ವಿಜ್ಞಾನಿಗಳೇ ಆವಿಷ್ಕರಿಸಿದ್ದಾರೆ ಈ ಸಂಗತಿ

ಬಹುತೇಕ ದೇಶಗಳಲ್ಲಿ ಗಾಂಜಾ ಸೇವನೆ ನಿಷಿದ್ಧ. ಆದರೂ ಜನರು ಅಕ್ರಮವಾಗಿ ಗಾಂಜಾ ಬೆಳೆಯುತ್ತಾರೆ, ಸೇವನೆ ಕೂಡ ಮಾಡುತ್ತಾರೆ. ಲೈಂಗಿಕತೆಗೆ ಸಂಬಂಧಿಸಿದ  ರಹಸ್ಯವೊಂದು ಗಾಂಜಾದಲ್ಲಿ ಅಡಗಿದೆ ಅನ್ನೋದು ಇದೀಗ ಬಹಿರಂಗವಾಗಿದೆ. ಸಂಭೋಗಕ್ಕೂ ಮೊದಲು ಗಾಂಜಾ ಸೇದುವುದು ಪರಾಕಾಷ್ಠೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಈಸ್ಟ್ ಕೆರೊಲಿನಾ ವಿಶ್ವವಿದ್ಯಾಲಯ ಮತ್ತು ಉತ್ತರ ಕೆರೊಲಿನಾ ಸ್ಟೇಟ್ ಯೂನಿವರ್ಸಿಟಿಯ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಗಾಂಜಾ ಸೇದುವವರು ಧೂಮಪಾನಿಗಳಲ್ಲದವರಿಗಿಂತ ಉತ್ತಮ ಲೈಂಗಿಕ ಜೀವನವನ್ನು ಹೊಂದಿದ್ದಾರೆ ಅನ್ನೋದು ವಿಜ್ಞಾನಿಗಳ ಅಭಿಪ್ರಾಯ.

ಅಧ್ಯಯನದ ಪ್ರಕಾರ 50 ಪ್ರತಿಶತಕ್ಕಿಂತ ಕಡಿಮೆ ಮಹಿಳೆಯರು ದೈಹಿಕ ಸಂಬಂಧಗಳಿಂದ ತೃಪ್ತರಾಗಿದ್ದಾರೆ. ಗಾಂಜಾ ಮಹಿಳೆಯರಿಗೆ ಹೆಚ್ಚು ವಿಶ್ರಾಂತಿ ನೀಡುತ್ತದೆ ಮತ್ತು ಅವರ ಬಯಕೆಯನ್ನು ಹೆಚ್ಚಿಸುತ್ತದೆ ಎಂಬುದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. ಇದು ಪರಾಕಾಷ್ಠೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಶೇ.70ಕ್ಕಿಂತ ಹೆಚ್ಚು ಪುರುಷರು ಮತ್ತು ಮಹಿಳೆಯರಲ್ಲಿ ಗಾಂಜಾ ಸೇವಿಸಿದ ನಂತರ ಲೈಂಗಿಕತೆಯನ್ನು ಇಷ್ಟಪಡುತ್ತಾರೆ ಎಂಬುದು  ಅಧ್ಯಯನದಲ್ಲಿ ದೃಢಪಟ್ಟಿದೆ. ಗಾಂಜಾ ಸೇವನೆಯು ಶೇ.40 ಕ್ಕಿಂತ ಹೆಚ್ಚು ಮಹಿಳೆಯರಿಗೆ ಪರಾಕಾಷ್ಠೆಯನ್ನು ತಲುಪಲು ಸಹಾಯ ಮಾಡಿದೆ ಎಂದು ಡೇಟಾ ಬಹಿರಂಗಪಡಿಸಿದೆ.

ಒಟ್ಟಾರೆಯಾಗಿ ಗಾಂಜಾ ಬಳಕೆಯು ಲಿಂಗ ಅಥವಾ ವಯಸ್ಸನ್ನು ಲೆಕ್ಕಿಸದೆ ವ್ಯಕ್ತಿಗಳಿಗೆ ಲೈಂಗಿಕ ಕ್ರಿಯೆ ಮತ್ತು ತೃಪ್ತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅಧ್ಯಯನದಲ್ಲಿ ಸಂಶೋಧಕರು ಬರೆದಿದ್ದಾರೆ. 18 ರಿಂದ 85 ವರ್ಷ ವಯಸ್ಸಿನ 811 ಜನರನ್ನು ಸಂಶೋಧನೆಗೆ ಒಳಪಡಿಸಲಾಗಿದೆ. ಗಾಂಜಾ ಲೈಂಗಿಕತೆ ಮೇಲೆ ಅಡ್ಡ ಪರಿಣಾಮ ಬೀರಬಹುದೇ ಎಂಬ ಬಗ್ಗೆಯೂ ಸಂಶೋಧನೆಯ ಅಗತ್ಯವಿದೆ ಎಂಬ ವಾದವೂ ಕೇಳಿ ಬಂದಿದೆ. ಬ್ರಿಟನ್‌ನಲ್ಲಿ ಗಾಂಜಾವನ್ನು ಹೊಂದುವುದು, ಬೆಳೆಯುವುದು, ವಿತರಿಸುವುದು ಅಥವಾ ಮಾರಾಟ ಮಾಡುವುದು ಅಪರಾಧವಾಗಿದೆ. ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆ, ಅನಿಯಮಿತ ದಂಡ ಅಥವಾ ಎರಡನ್ನೂ ವಿಧಿಸಬಹುದು. ಕೆಲವು ಸಂದರ್ಭಗಳಲ್ಲಿ 14 ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read