ಗರ್ಭಿಣಿಯರು ಸೇವಿಸಬೇಕು ಪೌಷ್ಟಿಂಕಾಂಶಯುಕ್ತ ಆಹಾರ

ಗರ್ಭಿಣಿಯರು ತಮ್ಮ ಆಹಾರದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಇಲ್ಲವಾದರೆ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಹಾಗಾಗಿ ಗರ್ಭಿಣಿಯರು ಪೌಷ್ಟಿಂಕಾಂಶಯುಕ್ತ ಆಹಾರಗಳನ್ನು ಸೇವಿಸಬೇಕು. ಆದರೆ ಇಂತಹ ಆಹಾರ ಪದಾರ್ಥಗಳಿಂದ ದೂರವಿರಬೇಕು.

*ಹಾಲು ಮತ್ತು ಚೀಸ್ : ಹಸಿ ಹಾಲು ಮತ್ತು ಚೀಸ್ ಗಳಲ್ಲಿ ಬ್ಯಾಕ್ಟೀರಿಯಾಗಳು ಇರುತ್ತದೆ. ಈ ಬ್ಯಾಕ್ಟೀರಿಯಾಗಳು ಮಗುವಿನ ಬೆಳವಣೆಗೆಯ ಮೇಲೆ ಪರಿಣಾಮ ಬೀರುತ್ತದೆ.

*ಕಚ್ಚಾ ಮೊಳಕೆ ಕಾಳುಗಳು: ಮೊಳಕೆ ಕಾಳುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಗರ್ಭಿಣಿಯರು ಮಾತ್ರ ಮೊಳಕೆಕಾಳುಗಳನ್ನು ಹಸಿಯಾಗಿ ಸೇವಿಸಬಾರದು. ಇದರಲ್ಲಿರುವ ಬ್ಯಾಕ್ಟೀರಿಯಾಗಳು ಆರೋಗ್ಯವನ್ನು ಹಾಳು ಮಾಡಬಹುದು.

*ಹಸಿ ಮೊಟ್ಟೆಗಳು : ಮೊಟ್ಟೆಗಳನ್ನು ಸರಿಯಾಗಿ ಬೇಯಿಸಿ ತಿನ್ನಬೇಕು. ಇಲ್ಲವಾದರೆ ಹಸಿ ಮೊಟ್ಟೆ ಮತ್ತು ಅರ್ಧ ಬೆಂದ ಮೊಟ್ಟೆಯಲ್ಲಿ ಬ್ಯಾಕ್ಟೀರಿಯಾಗಳಿರುವುದರಿಂದ ಇದನ್ನು ಸೇವಿಸಿದರೆ ಜ್ವರ, ವಾಂತಿ, ಅತಿಸಾರ, ಹೊಟ್ಟೆ ಸೆಳೆತ, ವಾಕರಿಕೆ ಉಂಟಾಗಬಹುದು.

*ಹಸಿ ಮೀನು : ಹಸಿ ಮೀನುಗಳು ಸೋಂಕಿಗೆ ಕಾರಣವಾಗಬಹುದು. ಹಾಗಾಗಿ ಗರ್ಭಿಣಿಯರು ಮೀನುಗಳನ್ನು ಸರಿಯಾಗಿ ಬೇಯಿಸಿ ತಿನ್ನಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read