ಗಡಿ ವಿವಾದ: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ ನಾಗರತ್ನ

ಕರ್ನಾಟಕ – ಮಹಾರಾಷ್ಟ್ರ ನಡುವಿನ ಬೆಳಗಾವಿ ಗಡಿ ವಿವಾದ ಪ್ರಕರಣದ ವಿಚಾರಣೆ ನಡೆಸುವ ಕುರಿತಂತೆ ರಚಿಸಲಾಗಿದ್ದ ತ್ರಿ ಸದಸ್ಯ ಪೀಠದಿಂದ ನ್ಯಾಯಮೂರ್ತಿ ನಾಗರತ್ನ ಹಿಂದೆ ಸರಿದಿದ್ದಾರೆ.

ತಾವು ಕರ್ನಾಟಕ ಮೂಲದವರಾಗಿರುವುದರಿಂದ ಈ ಪ್ರಕರಣದ ವಿಚಾರಣೆ ನಡೆಸುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ನ್ಯಾಯಮೂರ್ತಿ ನಾಗರತ್ನ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಈ ವಿವಾದದ ವಿಚಾರಣೆ ನಡೆಸುವ ಸಲುವಾಗಿ ನ್ಯಾಯಮೂರ್ತಿ ನಾಗರತ್ನ ಅವರನ್ನು ಒಳಗೊಂಡಂತೆ ನ್ಯಾಯಮೂರ್ತಿ ಕೆ.ಎಂ. ಜೋಸೆಫ್, ನ್ಯಾಯಮೂರ್ತಿ ಹೃಷಿಕೇಶ ರಾಯ್ ಅವರುಗಳಿದ್ದ ತ್ರಿ ಸದಸ್ಯ ಪೀಠವನ್ನು ರಚಿಸಲಾಗಿತ್ತು. ಇದೀಗ ನ್ಯಾಯಮೂರ್ತಿ ನಾಗರತ್ನ ಹಿಂದೆ ಸರಿದಿರುವುದರಿಂದ ಮತ್ತೊಬ್ಬರ ನೇಮಕ ಆಗಬೇಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read