
ತಮ್ಮ ಸಂಗಡಿಗರೊಂದಿಗೆ ರಸ್ತೆ ಮಾರ್ಗವಾಗಿ ಗೋವಾದಿಂದ ಮಹಾರಾಷ್ಟ್ರದ ಪುಣೆಗೆ ತೆರಳುತ್ತಿದ್ದ ಅವರು ಮಂಗಳವಾರ ಬೆಳಿಗ್ಗೆ ಮಾರ್ಗ ಮಧ್ಯದಲ್ಲಿ ಸಾಮಾನ್ಯ ಗ್ರಾಹಕರಂತೆ ಈ ಹೋಟೆಲ್ ಗೆ ಭೇಟಿ ನೀಡಿದ್ದರು.
ಅವರನ್ನು ಗುರುತಿಸಿದ ಹೋಟೆಲ್ ಮಾಲೀಕ ಮಹಮ್ಮದ್ ನಂದಗಡಿ ಮಾತನಾಡಿಸಿದ್ದು, ವಿಷಯ ಹಬ್ಬುತ್ತಲೇ ಅಲ್ಲಿದ್ದ ಕ್ರೀಡಾ ಪ್ರೇಮಿಗಳು ಆಶಿಶ್ ನೆಹ್ರಾ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

